ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಚಾಲೆಂಜ್, ಸಿಂಗಲ್ ಚಾಲೆಂಜ್, ಫ್ಯಾಮಿಲಿ ಚಾಲೆಂಜ್ ಎಂಬ ಭಿನ್ನ ಚಾಲೆಂಜ್ ಗಳು ಶುರುವಾಗಿವೆ.
ಇದಕ್ಕೆ ಸಖತ್ ರೆಸ್ಪಾನ್ಸ್ ಕೂಡ ಸಿಗ್ತಾ ಇದೆ. ಈ ಚಾಲೆಂಜ್ ಸ್ವೀಕರಿಸಿ ಈಗಾಗಲೇ ಸಾಕಷ್ಟು ಮಂದಿ ತಮ್ಮ ಒಂಟಿ ಫೋಟೋಗಳನ್ನು, ಸಂಗಾತಿ ಜತೆಗಿರುವ ಫೋಟೊಗಳನ್ನು, ಕುಟುಂಬದ ಜೊತೆಗಿರುವ ಫೋಟೋಗಳನ್ನು ಅಪ್ ಲೋಡ್ ಮಡುತ್ತಿದ್ದಾರೆ.
ಕೆಲವೇ ದಿನಗಳಲ್ಲಿ ನಾವು ಸಚಿವರಾಗುತ್ತೇವೆ : ಎಂಟಿಬಿ ನಾಗರಾಜ್
ಆದ್ರೆ ಈಗ ಚಾಲೆಂಜ್ ಹೆಸರಲ್ಲಿ ಆಗುತ್ತಿರುವ ಅಸಲಿ ಕಹಾನಿಯನ್ನು ಪುಣೆ ಪೊಲೀಸರು ಬಹಿರಂಗಪಡಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಕಪಲ್ ಚಾಲೆಂಜ್ ಹೆಸರಲ್ಲಿ ಹಾಕಿರುವ ಫೋಟೋಗಳನ್ನು ತಿರುಚಿ ಅದನ್ನು ಪೋರ್ನ್ ವೆಬ್ ಸೈಟ್ ಗಳಗೆ ಅಪ್ ಲೋಡ್ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
Think twice before you post a picture with your partner. A 'cute' challenge can go wrong if not cautious! #BeAware pic.twitter.com/oJkuYdlBWZ
— पुणे शहर पोलीस (@PuneCityPolice) September 24, 2020
ಇಂಥ ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿರುವ ಹಲವಾರು ಕಂಪ್ಲೇಂಟ್ ಗಳು ತಮಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಹಿನ್ನೆಲೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ ಲೋಡ್ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಎಂದು ಪುಣೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.








