ಬೆಂಗಳೂರು: ಚಿತ್ರೀಕರಣ ವೇಳೆ ನಿನ್ನೆ ದಿಢೀರ್ ಅಸ್ವಸ್ಥಗೊಂಡಿದ್ದ ನಟ ಶರಣ್ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅವತಾರ ಪುರುಷ ಚಿತ್ರದ ಚಿತ್ರೀಕರಣ ವೇಳೆ ಶರಣ್ ತೀವ್ರ ಹೊಟ್ಟೆನೋವಿನಿಂದ ಬಳಲಾರಂಭಿಸಿದ್ದರು. ತಕ್ಷಣ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ನಟ ಶರಣ್‍ಗೆ ಸ್ಕ್ಯಾನ್ ಮಾಡಿದಾಗ ಕಿಡ್ನಿಯಲ್ಲಿ ಸ್ಟೋನ್ ಇರುವುದು ಪತ್ತೆಯಾಗಿದೆ. ಕಿಡ್ನಿ ಸ್ಟೋನ್‍ನಿಂದ ಚಿಕಿತ್ಸೆ ನೀಡಿದ ಬಳಿಕ ಶರಣ್ ಹೊಟ್ಟೆ ನೋವು ಕಡಿಮೆಯಾಗಿದೆ. ಹೀಗಾಗಿ ಇಂದು ಶರಣ್‍ರನ್ನು ವೈದ್ಯರು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿದ್ದಾರೆ.
ಡಿಶ್ಚಾರ್ಜ್ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಟ ಶರಣ್, ಅರಂಭದಲ್ಲಿ ಮಸಲ್ ಕ್ಯಾಚ್ ಆಗಿರಬಹುದು ಎಂದು ಭಾವಿಸಿದ್ದೆ. ಆದರೆ ಸ್ಕ್ಯಾನಿಂಗ್ ಮಾಡಿದ ಬಳಿಕ ಸ್ಟೋನ್ ಇರುವುದು ತಿಳಿಯಿತು. ಸಣ್ಣ ಪ್ರಮಾಣದ ಸ್ಟೋನ್ ಇದ್ದು, ಏನೂ ತೊಂದರೆ ಇಲ್ಲ. ಒಂದು ವೇಳೆ ನೋವು ಕಡಿಮೆಯಾಗದಿದ್ದರೆ ಸರ್ಜರಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ನಾನು ಆಸ್ಪತ್ರೆಯಲ್ಲಿ ಮಲಗಿದ್ದರೂ ಸಿನಿಮಾ ಶೂಟಿಂಗ್‍ನದ್ದೇ ಚಿಂತೆ ಕಾಡುತ್ತಿತ್ತು. ನಿನ್ನೆ ತಡೆಯಲು ಆಗದಷ್ಟು ನೋವು ಕಾಣಿಸಿಕೊಂಡಿತು. ನನ್ನ ಜೀವನದಲ್ಲಿಯೇ ಇಂತಹ ನೋವು ಅನುಭವಿಸಿರಲಿಲ್ಲ. ಎರಡು ದಿನಗಳ ಹಿಂದೆ ನೋವು ಕಾಣಿಸಿಕೊಂಡಿದ್ದರೂ ಗೊತ್ತಾಗಲಿಲ್ಲ ಎಂದು ಶರಣ್ ಹೇಳಿದ್ದಾರೆ.
ಸಣ್ಣ ಪ್ರಮಾಣದ ಸ್ಟೋನ್ ಇದೆ ಎಂದು ವೈದ್ಯರು ಹೇಳಿದ್ದಾರೆ. ಎರಡು ದಿನ ರೆಸ್ಟ್ ಮಾಡಲು ವೈದ್ಯರು ಸೂಚಿಸಿದ್ದು, ಮೂರು ದಿನಗಳ ಬಳಿಕ ನೋವು ಕಡಿಮೆಯಾಗದಿದ್ದರೆ ಸರ್ಜರಿ ಮಾಡುವುದಾಗಿ ವೈದ್ಯರು ಸೂಚಿಸಿದ್ದಾರೆ ಎಂದು ನಟ ಶರಣ್ ಮಾಹಿತಿ ನೀಡಿದ್ದಾರೆ.
ಯಾವಾಗಲು ಮನಸ್ಸಿನಲ್ಲಿ ;ಮನೆಯಲ್ಲಿ ಜಗಳ, ಅಶಾಂತಿ ಉಂಟಾಗಲು ಕೆಲವು ಕಾರಣಗಳು ಮತ್ತು ಪರಿಹಾರ
ಯಾವಾಗಲು ಮನಸ್ಸಿನಲ್ಲಿ ;ಮನೆಯಲ್ಲಿ ಜಗಳ, ಅಶಾಂತಿ ಉಂಟಾಗಲು ಕೆಲವು ಕಾರಣಗಳು ಮತ್ತು ಪರಿಹಾರ ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು...








