ಜನಪ್ರಿಯ ಧಾರಾವಾಹಿಯ “ಜೊತೆ-ಜೊತೆಯಲಿ” ನಾಯಕಿಯಾಗಿ ಮನೆಮಾತಾಗಿರುವ “ಅನು” ಪಾಲಿಗೆ ಅದೃಷ್ಟದ ಕದ ತೆರೆದಿದಿ. ಅನು ಪಾತ್ರದಲ್ಲಿ ಮಿಂಚಿ ಅಪಾರ ಪ್ರೀತಿ ಸಂಪಾದಿಸಿರುವ ಮೇಘಾ ಶೆಟ್ಟಿ ಇದೀಗ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ತ್ರಿಬಲ್ ರೈಡ್” ಚಿತ್ರದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಮೇಘಾ ಶೆಟ್ಟಿ. ಇತ್ತೀಚೆಗಷ್ಟೇ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ತ್ರಿಬಲ್ ರೈಡ್ ಚಿತ್ರಕ್ಕೆ ನಾಯಕಿ ಯಾರು ಎಂಬ ಕುತೂಹಲಕ್ಕೆ ಈ ಮೂಲಕ ತೆರೆಬಿದ್ದಿದೆ.
“ಜೊತೆ-ಜೊತೆಯಲಿ” ಮೂಲಕ ಕಿರುತೆರೆಗೆ ಎಂಟ್ರಿಯಾಗಿ ದೊಡ್ಡ ಹೆಸರು ಸಂಪಾದಿಸಿರುವ ಮೇಘಾ ಸಿಲ್ವರ್ ಸ್ಕ್ರೀನ್ ಮೇಲೂ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಇನ್ನೂ ಅನು ಸಿನೆಮಾಗೆ ಹೋದ್ರೆ ಧಾರಾವಾಹಿ ಕಥೆ ಏನು ಅನ್ನೋ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಧಾರಾವಾಹಿಗೆ ತೊಂದರೆಯಾಗದಂತೆ ಅನು ಸಿನೆಮಾ ಶೂಟಿಂಗ್ ನಲ್ಲಿ ಭಾಗಿಯಾಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ತ್ರಿಬಲ್ ರೈಡ್ ಗೆ ಮಹೇಶ್ ಗೌಡ ಆಕ್ಷನ್ ಕಟ್ ಹೇಳ್ತಿದ್ದು, ರಾಮ್ ಗೋಪಾಲ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಹೈದರಾಬಾದ್ ನಲ್ಲಿ ಚಿತ್ರದ ಹಾಡುಗಳ ರೆಕಾರ್ಡಿಂಗ್ ನಡೆಯುತ್ತಿದೆ. ಸಿನಿಮಾಗೆ ಕಾರ್ತಿಕ್ ಸಂಗೀತವಿದ್ದು, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗವಿದೆ.








