ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ ಪಾಟೀಲ್ ಅವರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಅವರು 10 ದಿನ ಸ್ವಯಂ ಕ್ವಾರಂಟೈನ್ ನಲ್ಲಿದ್ದಾರೆ.
ಇದನ್ನೂ ಓದಿ : ಎಪಿಎಂಸಿ ಕಾಯ್ದೆಗೆ ಮಾಡಿರುವ ಕೆಟ್ಟ ತಿದ್ದುಪಡಿ ರದ್ದುಮಾಡಿ ; ರಣದೀಪ್ ಸುರ್ಜೇವಾಲ
ಈ ಕುರಿತು ಹೆಚ್.ಕೆ.ಪಾಟೀಲ್ ಅವರೇ ಟ್ವೀಟ್ ಮಾಡಿದ್ದು, ಕೊರೊನಾ ಪರೀಕ್ಷೆ ನಡೆಸಿದಾಗ ಕೊರೊನಾ ಪಾಟಿಸಿವ್ ಬಂದಿದೆ. ಆದರೆ ಯಾವುದೇ ಲಕ್ಷಣಗಳಿಲ್ಲ.
10 ದಿನ ಸ್ವಯಂ ಕ್ವಾರಂಟೈನ್ ನಲ್ಲಿದ್ದೇನೆ. ನಿಮ್ಮ ಹಾರೈಕೆಯಿಂದ ಬೇಗ ಗುಣಮುಖನಾಗುತ್ತೇನೆ.
ನನ್ನೊಂದಿಗೆ ಕೆಲವು ದಿನಗಳಿಂದ ಸಂಪರ್ಕ ಹೊಂದಿದ್ದವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
https://twitter.com/HKPatil1953/status/1310423358563995650?s=20








