ಬೆಂಗಳೂರು: ರೈತ ವಿರೋಧಿ ಕಾನೂನುಗಳ ವಿರುದ್ಧ 100ಕ್ಕೂ ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್ ಕರೆ ಕೊಟ್ಟಿದ್ದರೂ ರಾಜಧಾನಿ ಬೆಂಗಳೂರಿಗೆ ಬಂದ್‍ನ ಬಿಸಿ ತಟ್ಟಿಲ್ಲ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರ ಇದ್ದರೂ ವಿರಳವಾಗಿತ್ತು. ಮೆಜೆಸ್ಟಿಕ್, ಟೌನ್‍ಹಾಲ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಿದವು. ಆದರೆ ಎಂದಿನಂತೆ ಬಸ್ ಸಂಚಾರ ಇರಲಿಲಲ್ಲ. ಕಡಿಮೆ ಬಸ್‍ಗಳು ಮಾತ್ರ ನಗರದಲ್ಲಿ ಸಂಚಾರ ಮಾಡಿದವು.

ಓಲಾ-ಉಬರ್ ಕ್ಯಾಬ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಆಟೋಗಳು ಎಂದಿನಂತೆ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗಲಿಲ್ಲ. ನಮ್ಮ ಮೆಟ್ರೋ ರೈಲುಗಳು ಕೂಡ ಎಂದಿನಂತೆ ಸಂಚಾರ ನಡೆಸಿದರೆ, ಹೋಟೆಲ್, ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್‍ಗಳು ಓಪನ್ ಆಗಿವೆ.
ಆದರೆ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್‍ಗಳು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿದ್ದವು.








