ಮುಂಬೈ- ಕೊರೋನವೈರಸ್ ತಡೆಗಟ್ಟಲು ನಗರದ 10,000 ಕಟ್ಟಡಗಳು ಸೀಲ್ ಡೌನ್
ಮುಂಬೈ, ಸೆಪ್ಟೆಂಬರ್29: ಮುಂಬೈನಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಗರದಲ್ಲಿ 10,000 ಕ್ಕೂ ಹೆಚ್ಚು ಕಟ್ಟಡಗಳನ್ನು ಸೀಲ್ ಡೌನ್ ಮಾಡಲಾಗಿದೆ.
ದೇಶದಲ್ಲಿ ಗರಿಷ್ಠ ಕೊರೋನಾ ಸೋಂಕು ಪ್ರಕರಣ ದಾಖಲಾದ 10 ರಾಜ್ಯಗಳು
ಬಿಒಎಂಸಿ ಮಾಹಿತಿಯ ಪ್ರಕಾರ, ಕೋವಿಡ್ -19 ಹರಡುವುದನ್ನು ತಡೆಯಲು 676 ಪ್ರದೇಶಗಳಲ್ಲಿ 10,289 ಕಟ್ಟಡಗಳಿಗೆ ಮೊಹರು ಹಾಕಲಾಗಿದೆ. ಈ ಪೈಕಿ ದಹೀಸರ್, ಮಲಾಡ್ ಮತ್ತು ಕಂಡಿವಾಲಿಯಲ್ಲಿ ಹೆಚ್ಚಿನ ಕಟ್ಟಡಗಳು ಸೀಲ್ ಡೌನ್ ಮಾಡಲಾಗಿದೆ.
ಮುಂಬೈನಲ್ಲಿ ಭಾನುವಾರ 2261 ಪ್ರಕರಣಗಳು ಮತ್ತು 44 ಸಾವುಗಳು ದಾಖಲಾಗಿದ್ದು, ಒಟ್ಟಾರೆ ನಗರದ ಸೋಂಕು ಪ್ರಕರಣಗಳ ಸಂಖ್ಯೆ 1,98,720 ಕ್ಕೆ ಮತ್ತು ಸಾವಿನ ಸಂಖ್ಯೆ 8,791 ಕ್ಕೆ ತಲುಪಿದೆ.
ಭಾನುವಾರದವರೆಗೆ ಒಂದೇ ದಿನದಲ್ಲಿ ಒಟ್ಟು 4190 ಜನರು ಚೇತರಿಸಿಕೊಂಡಿದ್ದು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 1,62,939 ಆಗಿದ್ದು, ಚೇತರಿಕೆ ಪ್ರಮಾಣವು ಶೇಕಡಾ 82 ರಷ್ಟಿದೆ. ಪ್ರಸ್ತುತ, ನಗರದಲ್ಲಿ 26,593 ಸಕ್ರಿಯ ಪ್ರಕರಣಗಳಿವೆ.
ಮುಂಬೈ- ಕೊರೋನವೈರಸ್ ತಡೆಗಟ್ಟಲು ನಗರದ 10,000 ಕಟ್ಟಡಗಳು ಸೀಲ್ ಡೌನ್#COVID19India #MumbaiIndians #Mumbai #CoronaVirusUpdates #kannadiga_Mumbai@Mumbai pic.twitter.com/gkP4CD0FGy
— Saaksha TV (@SaakshaTv) September 28, 2020
ಏತನ್ಮಧ್ಯೆ, ಮಹಾರಾಷ್ಟ್ರವು ಭಾನುವಾರ 18,056 ಹೊಸ ಕೊರೋನವೈರಸ್ ಸಕಾರಾತ್ಮಕ ಪ್ರಕರಣಗಳನ್ನು ದಾಖಲಿಸಿದೆ, ಈ ಮೂಲಕ ರಾಜ್ಯದ ಒಟ್ಟಾರೆ ಕೊರೋನಾ ಸೋಂಕಿನ ಸಂಖ್ಯೆ 13,39,232 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಭಾನುವಾರ ಒಟ್ಟು 13,565 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದ ಚೇತರಿಕೆ ಸಂಖ್ಯೆ 10,30,015 ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 2,73,228 ಸಕ್ರಿಯ ಪ್ರಕರಣಗಳಿವೆ. ಈವರೆಗೆ 65,65,649 ಜನರನ್ನು ಪರೀಕ್ಷಿಸಲಾಗಿದೆ ಎಂದು ಅದು ತಿಳಿಸಿದೆ.