ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿಲ್ಡೂರ ಗ್ರಾಮದಲ್ಲಿ ಸೋಮವಾರ ಅಪರಿಚಿತ ಭಯೋತ್ಪಾದಕ ಬಂದೂಕುಧಾರಿಗಳ ಗುಂಡಿಗೆ ಒಬ್ಬ ಸರ್ಕಾರಿ ನೌಕರ ಸಾವನ್ನಪ್ಪಿದ್ದಾರೆ.
ತೀವ್ರ ಗಾಯಾಗೊಂಡ ಅವರನ್ನು ಶ್ರೀನಗರದ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಇತ್ತೀಚಿಗೆ ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶ ಘೋಷಣೆ ಮಾಡಿದ ನಂತರ ಸ್ಥಳೀಯ ಸರಕಾರಿ ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ಮೇಲೆ ಭಯೋತ್ಪಾದಕರ ದಾಳಿ ಮುಂದುವರಿದಿದೆ.
ಅಜ್ಞಾತ ಬಂದೂಕುಧಾರಿಗಳು ಅಬ್ದುಲ್ ರಶೀದ್ ನಾಯ್ಕು ಅವರ ಪುತ್ರ ಸಬ್ಜರ್ ಅಹ್ಮದ್ ನಾಯ್ಕು ಅವರ ಮೇಲೆ ಸ್ಥಳೀಯ ನಿಲ್ಡೂರಾ ಗ್ರಾಮದಲ್ಲಿ ಗುಂಡು ಹಾರಿಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿಂದ ಅವರನ್ನು ಗಂಭೀರ ಗಾಯಗಳ ದೃಷ್ಟಿಯಿಂದ ವಿಶೇಷ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಆದರೆ, ಅವರು ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ನಜೀರ್ ಚೌಧರಿ ತಿಳಿಸಿದ್ದಾರೆ.
ನಾಯ್ಕೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








