ನವದೆಹಲಿ: ಇಡೀ ವಿಶ್ವಾದ್ಯಂತ ಹಾವಳಿ ಮುಂದುವರೆಸಿರುವ ಕೊರೊನಾಗೆ ಜಾಗತಿವಾಗಿ ಒಟ್ಟು ಬಲಿಯಾದವರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. 10 ಲಕ್ಷಕ್ಕೂ ಅಧಿಕ ಜನರು ಈ ಹೆಮ್ಮಾರಿಗೆ ಉಸಿರು ನಿಲ್ಲಿಸಿದ್ದಾರೆ.
ಹಲವಾರು ದೇಶಗಳಲ್ಲಿ ಸೋಂಕುಗಳು ಮತ್ತೆ ಹೆಚ್ಚಾಗುವುದರಿಂದ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಅದ್ರಲ್ಲೂ ಭಾರತ, ಅಮೆರಿಕಾ, ರಷ್ಯಾ, ಬ್ರೆಜಿಲ್ ನಲ್ಲಿ ಕೊರೊನಾ ಅಬ್ಬರಕ್ಕೆ ಜನರು ನಲುಗಿಹೋಗಿದ್ದಾರೆ. ಭಾರತದಲ್ಲಿ ಈವರೆಗೂ 96 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.