ನವದೆಹಲಿ: ಯುವ ಕಾಂಗ್ರೆಸ್ ನ ಪಂಜಾಬ್ ಘಟಕದ ಸದಸ್ಯರು ದೆಹಲಿಯ ಹೃದಯ ಭಾಗದದಲ್ಲಿರುವ ಇಂಡಿಯಾ ಗೇಟ್ ಬಳಿ ರಾಜ್ ಪಥ್ ನಲ್ಲಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ ಘಟನೆಯನ್ನ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ರೈತರು ಪೂಜಿಸುವ ಉಪಕರಣಗಳಿಗೆ ಬೆಂಕಿ ಹಚ್ಚುವ ಮೂಲಕ ಅವರನ್ನ ಅವಮಾನಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿರುವ ಮೋದಿ ಅವರು ದೇಶಕ್ಕೆ ಆಗುತ್ತಿರುವ ಪ್ರತಿಯೊಂದನ್ನು ವಿರೋಧಿಸುವುದು ಈ ಜನರ ಅಭ್ಯಾಸವಾಗಿದೆ.
ಅವರು ರಾಜಕೀಯವನ್ನ ಅಭ್ಯಾಸ ಮಾಡಲು ಇರುವುದು ಇದೊಂದೇ ಮಾರ್ಗ ಅನ್ನಿಸುತ್ತೆ ಎಂದು ಕೃಷಿ ಪ್ರತಿಭಟನಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಾಗ್ದಾಳಿ ನಡೆಸಿರುವ ಪ್ರದಾನಿ ಅವರು , ಕೆಲವು ದಿನಗಳ ಹಿಂದೆ ಹೊಸ ಕಾನೂನು ಜಾರಿಗೆ ಬಂದ ನಂತರ ದೇಶದಲ್ಲಿರುವ ರೈತರನ್ನ ಅನೇಕ ಸಂಕೋಲೆಗಳಿಂದ ಮುಕ್ತ ಮಾಡಿದೆ.
ಈಗ ರೈತ ತನ್ನ ಉತ್ಪನ್ನಗಳನ್ನ ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು. ಆದ್ರೆ, ಕೇಂದ್ರ ಸರ್ಕಾರ ರೈತರಿಗೆ ಹಕ್ಕು ನೀಡಿದರೂ, ರೈತ ಸ್ವಾತಂತ್ರ್ಯವನ್ನ ವಿರೋಧಿಸಿ ಪ್ರತಿಭಟಿಸಲು ಬರುತ್ತಿದ್ದಾರೆ.
ಈಗ ಅವರು ರೈತರು ಪೂಜೆ ಮಾಡುವ ಸರಕು ಮತ್ತು ಸಲಕರಣೆಗಳಿಗೆ ಬೆಂಕಿ ಹಚ್ಚುವ ಮೂಲಕ ರೈತರನ್ನ ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.