ಬೀದರ್: ಕೊರೊನಾ ಸೋಂಕು ಹೆಚ್ಚಳದಿಂದ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗದ ಕಾರಣ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಶಾಲೆ ಪ್ರಾರಂಭ ಮಾಡುವ ಧಾವಂತ ಸರ್ಕಾರಕ್ಕೆ ಇಲ್ಲ, ದಿನಾಂಕ ಕೂಡ ನಿಶ್ಚಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ 9, 10ನೇ, ಪ್ರಥಮ, ದ್ವಿತೀಯ ಪಿಯುಸಿ ಈ ನಾಲ್ಕು ತರಗತಿ ಮಕ್ಕಳಲ್ಲಿ ಶಾಲಾ-ಕಾಲೇಜುಗಳಿಗೆ ಬರಬಹುದು. ಶಿಕ್ಷಕರ ಬಳಿ ಯಾವುದೇ ವಿಷಯಗಳ ಬಗ್ಗೆ ಮಾರ್ಗದರ್ಶನ ಪಡೆಯಬಹುದು ಅಂತ ಹೇಳಲಾಗಿತ್ತು. ನಮ್ಮ ರಾಜ್ಯದಲ್ಲಿ ಅದಕ್ಕೂ ಅವಕಾಶ ನೀಡದೇ ಮುಂದೂಡಲಾಗಿತ್ತು ಎಂದರು.
ಕೊರೊನಾ ಹೆಚ್ಚಾಗುತ್ತಿದೆ, ಈ ನಡುವೆ ಶಾಲೆ ಪ್ರಾರಂಭ ಮಾಡಬೇಕಾ, ಬೇಡಾ ಎಂದು ಶಾಸಕರು, ಸಂಸದರಿಗೆ ಪತ್ರ ಮೂಲಕ ಅಭಿಪ್ರಾಯ ಕೇಳಿದ್ದೇನೆ. ಬೆಂಗಳೂರಿಗೆ ಹೋಗಿ ನಾಳೆ ಶಿಕ್ಷಕರ ಜೊತೆ ಸಂವಾದ ನಡೆಸುತ್ತೇನೆ. ನಾಡಿದ್ದು ಶಿಕ್ಷಣ ತಜ್ಞರ ಜೊತೆ ಸಭೆ ನಡೆಲಾಗುವುದು. ವಿಶೇಷವಾಗಿ ಆರೋಗ್ಯ ತಜ್ಞರ ಸಮಿತಿ ಅಭಿಪ್ರಾಯ ಪಡೆದು ಇದೆಲ್ಲ ಕ್ರೊಢೀಕರಿಸಿ ಪೋಷಕರಿಗೆ ಇರುವ ಕಾಳಜಿ, ಮಕ್ಕಳ ಆರೋಗ್ಯ, ಇದೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂದಿನ ಹೆಜ್ಜೆ ಇಡಲಾಗುವುದು.
ಸದ್ಯಕ್ಕೆ ಶಾಲಾ-ಕಾಲೇಜು ಆರಂಭಕ್ಕೆ ಯಾವುದೇ ದಿನಾಂಕ ನಿಶ್ಚಯ ಮಾಡಿಲ್ಲ. ಕೇವಲ ಪತ್ರದ ಮೂಲಕ ಅಭಿಪ್ರಾಯ ಕೇಳಿದ್ದೇವೆ. ಪೋಷಕರಲ್ಲಿ ಆತಂಕ, ಗೊಂದಲ ಬೇಡ. ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭ ಮಾಡುವ ಯೋಜನೆ ಮಾಡಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ವೆಬ್‍ಸೈಟ್ ನಲ್ಲಿ ಪೋಷಕರು ಕೂಡ ಅಭಿಪ್ರಾಯ ತಿಳಿಸಬಹುದು. ಶಾಲೆ ಪ್ರಾರಂಭಿಸುವ ಬಗ್ಗೆ ಯಾವುದೇ ಅವಸರ, ಧಾವಂತವಾಗಿಲ್ಲ. ಇದು ಒಂದು ಆಂಗಲ್ ಅಷ್ಟೇ, ಶಾಲೆ ಇಲ್ಲದ ಕಾರಣಕ್ಕೆ ಬಾಲ್ಯ ವಿವಾಹ, ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಸಿಲಿಕಾನ್ ಸಿಟಿಯಲ್ಲಿ ಸರಣಿ ಅಪಘಾತ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸರಣಿ ಅಪಘಾತ ಸಂಭವಿಸಿದೆ. ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಆಟೋ ಚಾಲಕ ಓವರ್ ಟೇಕ್ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ...