ಚಿಕ್ಕಮಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಇಟ್ಟಿದ್ದೇನೆ. ಅಕ್ಟೋಬರ್ ಎರಡರ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾನು ಪಕ್ಷದ ಕಾರ್ಯಕರ್ತನಾಗಿ ಬೆಳೆದು ಬಂದಿದ್ದು, ಸಂಘಟನೆಗೆ ಮೊದಲ ಆದ್ಯತೆಯನ್ನು ನೀಡುತ್ತೇನೆ ಎಂದಿದ್ದಾರೆ.
ಪಕ್ಷದ ಸಂಘಟನೆ ಅಥವಾ ಸರ್ಕಾರದಲ್ಲಿ ಭಾಗಿ ಎನ್ನುವ ಪ್ರಶ್ನೆಗೆ ತಾನು ಸಂಘಟನೆಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಸಚಿವ ಸ್ಥಾನ ಶಾಶ್ವತವಲ್ಲ, ಸಂಘಟನೆ ಮುಖ್ಯ ಎಂದು ಸಿ.ಟಿ ರವಿ ಹೇಳಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಬಿಜೆಪಿ ಹೈಕಮಾಂಡ್ ಸಚಿವ ಸಿ.ಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ಬಿಜೆಪಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ನಿಯಮವಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಿ.ಟಿ ರವಿ ಅವರನ್ನು ಪಕ್ಷದ ಸಂಘಟನೆ, ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ದೃಷ್ಟಿಯಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಹೀಗಾಗಿ ಯಾವಾಗ ಬೇಕಾದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವರಿಷ್ಠರು ಹೇಳಬಹುದು. ಅದಕ್ಕಾಗಿಯೇ ರಾಜೀನಾಮೆ ಸಿದ್ದಮಾಡಿಕೊಂಡಿದ್ದೇನೆ ಎಂದು ಸಿ.ಟಿ ರವಿ ರಾಜೀನಾಮೆಗೆ ಸಿದ್ದ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು: ನೈಸ್ ಯೋಜನೆ ಮತ್ತು ಭೂ ಅಕ್ರಮದ ವಿಚಾರವಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ಸಮರ ಈಗ...








