ನೇಪಾಳದಲ್ಲಿ ಚೀನಾ ವಿರುದ್ಧ ತೀವ್ರಗೊಂಡ ಪ್ರತಿಭಟನೆ
ಕಠ್ಮಂಡ್, ಸೆಪ್ಟೆಂಬರ್30: ನೇಪಾಳದಲ್ಲಿ ಚೀನಿಯರು ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಚೀನಾ ವಿರುದ್ಧದ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಚೀನಾದ ಅತಿಕ್ರಮಣದ ವಿರುದ್ಧ ನೇಪಾಳದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ನೇಪಾಳಿ ರಾಜಧಾನಿ ಕಠ್ಮಂಡುವಿನಲ್ಲಿ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ರಸ್ತೆಗಿಳಿದು ಘೋಷಣೆಗಳನ್ನು ಕೂಗಿದರು ಮತ್ತು ಚೀನಾದ ರಾಯಭಾರ ಕಚೇರಿಯ ಹೊರಗೆ ಫಲಕಗಳನ್ನು ಪ್ರದರ್ಶಿಸಿದರು.
ಎಂಚಿನ (ಎಂಥಾ) ಕ್ಯಾಚ್ ಮಾರ್ರೆ.. ಅನ್ನಿಸಿಕೊಂಡವ ಐದು ವರ್ಷಗಳ ಹಿಂದೆ ವೀಲ್ ಚೇರ್ ನಲ್ಲಿ ಓಡಾಡುತ್ತಿದ್ದ..!
ವರದಿಗಳ ಪ್ರಕಾರ, ಗಡಿ ಪ್ರದೇಶಗಳಲ್ಲಿ ನೇಪಾಳದ ಭೂಮಿಯನ್ನು ಚೀನಾ ವಶಪಡಿಸಿಕೊಂಡ ಬಗ್ಗೆ ನೇಪಾಳದ ವಿವಿಧ ಗುಂಪುಗಳು ಪ್ರತಿಭಟನೆಗಳನ್ನು ಯೋಜಿಸಿವೆ. ಇದಕ್ಕೂ ಮೊದಲು ಚೀನಾ ನೇಪಾಳದ ಹಮ್ಲಾ ಜಿಲ್ಲೆಯ ಗಡಿ ಪ್ರದೇಶಗಳನ್ನು ಅತಿಕ್ರಮಿಸಿತ್ತು.
ಈ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡ ನಂತರ ಚೀನಾ ಕೆಲವು ಹಳ್ಳಿಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದೆ.
ಈ ಪ್ರತಿಭಟನೆಯು ನೇಪಾಳದ ರಾಜಕೀಯ ಬಿಕ್ಕಟ್ಟನ್ನು ಇನ್ನಷ್ಟು ಗಾಢವಾಗಿಸಿದೆ. ನೇಪಾಳದ ಭೂಮಿಯನ್ನು ಹಿಂತಿರುಗಿಸಿ ಮತ್ತು ಚೀನೀ ವಿಸ್ತರಣಾವಾದವನ್ನು ನಿಲ್ಲಿಸಿ ಎಂದು ಫಲಕಗಳು ಮತ್ತು ಪೋಸ್ಟರ್ಗಳನ್ನು ಹೊತ್ತ ಪ್ರತಿಭಟನಾಕಾರರಿಗೆ, ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ (ಎನ್ಸಿ) ಬೆಂಬಲವನ್ನು ಸೂಚಿಸಿದೆ. ಆದರೆ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷ (ಎನ್ಸಿಪಿ) ಚೀನಾ ನೇಪಾಳಿ ಭೂಮಿಯನ್ನು ಆಕ್ರಮಿಸಿಕೊಂಡಿರುವುದನ್ನು ನಿರಾಕರಿಸಿದೆ.
ಕೋವಿಡ್-19 ಸಮಯದಲ್ಲಿ ಕತ್ತೆ ಹಾಲಿನ ಆರೋಗ್ಯ ಪ್ರಯೋಜನಗಳು
ಆಡಳಿತ ಪಕ್ಷದ ನಿಲುವು ಸರ್ಕಾರದ ವರದಿಗಳಿಗೆ ತದ್ವಿರುದ್ಧವಾಗಿದೆ. ಈ ವರ್ಷದ ಜೂನ್ನಿಂದ, ನೇಪಾಳ ಸರ್ಕಾರದ ವರದಿಯ ಪ್ರಕಾರ, ಟಿಬೆಟ್ನಲ್ಲಿ ರಸ್ತೆ ನಿರ್ಮಾಣವನ್ನು ಬಳಸಿಕೊಂಡು ಚೀನಾ ನೇಪಾಳದ ಭೂಮಿಯನ್ನು ಅತಿಕ್ರಮಿಸುತ್ತಿದೆ.
ಚೀನಾ 10 ಸ್ಥಳಗಳಲ್ಲಿ 30 ಹೆಕ್ಟೇರ್ ಭೂಮಿಯನ್ನು ಅತಿಕ್ರಮಿಸಿದೆ ಮತ್ತು ನೇಪಾಳದಲ್ಲಿ ತಮ್ಮ ಅಕ್ರಮ ಪ್ರಾದೇಶಿಕ ವಿಸ್ತರಣೆಯನ್ನು ಗರಿಷ್ಠಗೊಳಿಸಲು ಗಡಿ ಪ್ರದೇಶಗಳಲ್ಲಿ ನದಿಗಳ ಹರಿವನ್ನು ಚೀನಿಯರು ತಿರುಗಿಸುತ್ತಿದ್ದಾರೆ ಎಂದು ನೇಪಾಳದ ಕೃಷಿ ಸಚಿವಾಲಯವು ಹೇಳಿತ್ತು.
ದಾಲ್ಚಿನ್ನಿಯ 7 ಆಯುರ್ವೇದ ಸಂಬಂಧಿತ ಆರೋಗ್ಯ ಪ್ರಯೋಜನಗಳು
ಸ್ಥಳೀಯ ಜಿಲ್ಲಾ ಅಧಿಕಾರಿಗಳು ಆಗಸ್ಟ್ ಅಂತ್ಯದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಹಮ್ಲಾ ಜಿಲ್ಲೆಯಲ್ಲಿ ನಡೆಸಿದ ತಪಾಸಣೆಯ ಸಂದರ್ಭದಲ್ಲಿ ನೇಪಾಳದ ಭೂಮಿಯನ್ನು ಚೀನಾ ಅತಿಕ್ರಮಣ ಮಾಡಿರುವುದನ್ನು ಪತ್ತೆ ಮಾಡಿದೆ. ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಹಮ್ಲಾ ಜಿಲ್ಲೆಯ ಗ್ರಾಮೀಣ ಪುರಸಭೆಯಲ್ಲಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ.








