ADVERTISEMENT
Friday, March 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಸುದೀರ್ಘ ವಿಚಾರಣೆ ಕಂಡಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿಗೆ  ಕ್ಷಣಗಣನೆ ಶುರು

admin by admin
September 30, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಸುದೀರ್ಘ ವಿಚಾರಣೆ ಕಂಡಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿಗೆ  ಕ್ಷಣಗಣನೆ ಶುರು

ಲಕ್ನೋ, ಸೆಪ್ಟೆಂಬರ್‌30: ಇಂದು ವಿಶೇಷ ನ್ಯಾಯಾಲಯ 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ನೀಡಲಿದೆ. ಇದರಲ್ಲಿ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಆರೋಪಿಗಳಾಗಿದ್ದಾರೆ.
ಸೆಪ್ಟೆಂಬರ್ 16 ರಂದು ಸಿಬಿಐ ನ್ಯಾಯಾಧೀಶ ಎಸ್.ಕೆ. ಯಾದವ್ ಅವರು ಎಲ್ಲಾ 32 ಆರೋಪಿಗಳು ತೀರ್ಪಿನ ದಿನವಾದ ಸೆಪ್ಟೆಂಬರ್ 30ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದ್ದರು.

Related posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

March 13, 2026
ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

March 13, 2026

ಭಾರತೀಯ ಯೋಧರಿಂದ ಎಲ್ಒಸಿ ಉಲ್ಲಂಘನೆ ಎಂದು ಅಪಾದಿಸಿ ಭಾರತದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಪಾಕ್

 

ಆರೋಪಿಗಳಲ್ಲಿ ಮಾಜಿ ಉಪ ಪ್ರಧಾನಿ ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಜೋಶಿ, ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಮತ್ತು ಸಾಧ್ವಿ ರಿಥಂಬರ ಸೇರಿದ್ದಾರೆ.
ಕೊರೋನವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಇಬ್ಬರೂ ಕ್ವಾರಂಟೈನ್ ಗೆ ಒಳಗಾಗಿದ್ದು, ನ್ಯಾಯಾಲಯಕ್ಕೆ ಗೈರು ಹಾಜರಾಗುವ ಸಂಭವ ಹೆಚ್ಚಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕೂಡ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

ಡಿಆರ್ಡಿಒ – ರಿಸರ್ಚ್ ಸೆಂಟರ್ ಇಮರತ್ (ಆರ್ಸಿಐ) ನಲ್ಲಿ ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ

ಆದರೆ, ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿರುವ ಈ ಪ್ರಕರಣದಲ್ಲಿ 48 ಜನರ ವಿರುದ್ಧ ಆರೋಪಗಳನ್ನು ವಿಧಿಸಲಾಗಿದ್ದರೂ, ಅದರಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ.
ಸುಪ್ರೀಂ ಕೋರ್ಟ್ ಮೊದಲು ಆಗಸ್ಟ್ 31 ಎಂದು ಗಡುವು ಎಂದು ನಿಗದಿಪಡಿಸಿ ನಂತರ ಸಿಬಿಐ ನ್ಯಾಯಾಲಯವು ತನ್ನ ತೀರ್ಪು ನೀಡಲು ಒಂದು ತಿಂಗಳವರೆಗೆ ವಿಸ್ತರಿಸುವುದರೊಂದಿಗೆ, ವಿಚಾರಣಾ ನ್ಯಾಯಾಲಯವು ತನ್ನ ವಿಚಾರಣೆಯನ್ನು ಪ್ರಾರಂಭಿಸಿತು. ಕೇಂದ್ರ ಸಂಸ್ಥೆ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಸುಪ್ರೀಂ ಕೋರ್ಟ್ 2017 ರ ಏಪ್ರಿಲ್ 19 ರಂದು ಆರೋಪದ ವಿಚಾರಣೆಗೆ ಆದೇಶಿಸಿತು ಮತ್ತು ಅದನ್ನು ಎರಡು ವರ್ಷಗಳಲ್ಲಿ ತೀರ್ಮಾನಿಸುವಂತೆ ವಿಶೇಷ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತ್ತು.
ಅಯೋಧ್ಯೆಯಲ್ಲಿನ ಮಸೀದಿಯನ್ನು ಪುರಾತನ ರಾಮ ಮಂದಿರ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡು ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್‌ನಲ್ಲಿ ಕರ ಸೇವಕರು ಧ್ವಂಸ ಮಾಡಿದ್ದರು. ‌
ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (ಸೆಕ್ಷನ್ 153 ಎ), ರಾಷ್ಟ್ರೀಯ ಏಕೀಕರಣದ ಮೇಲೆ ಪರಿಣಾಮ ಬೀರುವ ಹೇಳಿಕೆಗಳನ್ನು ನೀಡುವುದು (ಸೆಕ್ಷನ್ 153 ಬಿ) ಅಥವಾ ಸಾರ್ವಜನಿಕ ಕಿಡಿಗೇಡಿತನ (ಸೆಕ್ಷನ್ 505) ಸೇರಿದಂತೆ ಭಾರತೀಯ ಅಪರಾಧ ಸಂಹಿತೆ (ಐಪಿಸಿ) ಅಡಿಯಲ್ಲಿ ವಿವಿಧ ಆರೋಪ ಹೊರಿಸಲಾಗಿದೆ.
ಆದರೆ ಆರೋಪಿಗಳು ತಮ್ಮ ತಪ್ಪನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ನಾವು ನಿರಪರಾಧಿಗಳು ಎಂದು ಮನವಿ ಮಾಡಿದ್ದು, ನಮ್ಮನ್ನು ರಾಜಕೀಯ ಆಟಕ್ಕೆ ದಾಳವನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಮಹತ್ವದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ವಿವಾದಿತ ಸ್ಥಳವನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಮಂಜೂರು ಮಾಡಿದ್ದರೆ, ಮಸೀದಿಯನ್ನು ನೆಲಸಮಗೊಳಿಸಿರುವುದು ಕಾನೂನಿನ ನಿಯಮದ ಉಲ್ಲಂಘನೆ ಎಂದು ಹೇಳಿದೆ. ಜೊತೆಗೆ ಮಸೀದಿ ನಿರ್ಮಿಸಲು ನಗರದಲ್ಲಿ ಐದು ಎಕರೆಗಳ ಪರ್ಯಾಯ ಸ್ಥಳವನ್ನು ಹಸ್ತಾಂತರಿಸಲು ಕೇಂದ್ರಕ್ಕೆ ಸೂಚಿಸಿತ್ತು.

ವಾಟ್ಸಾಪ್ ಚಾಟ್ ಸೋರಿಕೆಯನ್ನು ಹೇಗೆ ತಪ್ಪಿಸುವುದು – ಇಲ್ಲಿದೆ ಮಾಹಿತಿ

ಈಗಾಗಲೇ ಮಸೀದಿ ನಿರ್ಮಿಸಲು ನಗರದಲ್ಲಿ ಐದು ಎಕರೆಗಳ ಪರ್ಯಾಯ ಸ್ಥಳವನ್ನು ಗುರುತಿಸಲಾಗಿದೆ.
ಆಗಸ್ಟ್‌ 5ರಂದು ಅಯೋಧ್ಯೆಯ ರಾಮಜನ್ಮಭೂಮಿ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದು, ಮಂದಿರ ನಿರ್ಮಾಣ ಕಾರ್ಯವೂ ಪ್ರಾರಂಭವಾಗಿದೆ.
ಸುದೀರ್ಘ ವಿಚಾರಣೆ ಕಂಡಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಹುನಿರೀಕ್ಷಿತ ತೀರ್ಪು ಇಂದು ಪ್ರಕಟವಾಗಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ.

ವೀಳ್ಯದೆಲೆಗಳ 6 ಬೆರಗುಗೊಳಿಸುವ ಆರೋಗ್ಯ ಪ್ರಯೋಜನಗಳು

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv

 

Tags: Ayodhyababri masjidBabri Masjid demolition casecountdownkannada newsKarnataka newslatest-newsRam Mandirspecial court
ShareTweetSendShare
Join us on:

Related Posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

by Shwetha
March 13, 2026
0

ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

by Shwetha
March 13, 2026
0

ಬಿ. ವೈ. ವಿಜಯೇಂದ್ರ ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ನೋಡಿದರೆ ಸರ್ಕಾರದ ಆರ್ಥಿಕ...

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

by Shwetha
March 13, 2026
0

ಕುಂಭಮೇಳದಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ಜನಪ್ರಿಯತೆ ಗಳಿಸಿ, ಬಳಿಕ ಆಲ್ಬಮ್ ಹಾಡುಗಳು ಹಾಗೂ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಉದಯೋನ್ಮುಖ ನಟಿ ಮೊನಾಲಿಸಾ ಭೋಸ್ಲೆ ಇದೀಗ ತಮ್ಮ ದಿಟ್ಟ ನಿರ್ಧಾರದ...

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

by Shwetha
March 13, 2026
0

ಸಮಾನತೆಯ ಹರಿಕಾರ, ಕಾಯಕಯೋಗಿ ಬಸವಣ್ಣ ಹಾಗೂ ಅಪ್ರತಿಮ ಶಿವಶರಣೆ ಅಕ್ಕಮಹಾದೇವಿಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳುಮಟ್ಟದ ಹಾಗೂ ವಿಕೃತ ಪೋಸ್ಟ್ ಹಾಕಿರುವ ಘಟನೆ ಇಡೀ ನಾಡಿನಾದ್ಯಂತ...

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

by Shwetha
March 13, 2026
0

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಒಂದು ಅಚ್ಚರಿಯ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram