ADVERTISEMENT
Sunday, June 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- 12ನೇ ಪಂದ್ಯದಲ್ಲಿ ಕೆಕೆಆರ್ -ರಾಜಸ್ತಾನ ರಾಯಲ್ಸ್ ಫೈಟ್

admin by admin
September 30, 2020
in IPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಐಪಿಎಲ್ 2020- 12ನೇ ಪಂದ್ಯದಲ್ಲಿ ಕೆಕೆಆರ್ -ರಾಜಸ್ತಾನ ರಾಯಲ್ಸ್ ಫೈಟ್

#dinesh karthik #ipl 2020 #teven Smith2020ರ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಗಳು ತಂಡಗಳು ಮುಖಾಮುಖಿಯಾಗಲಿವೆ.
ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ರಾಜಸ್ತಾನ ರಾಯಲ್ಸ್ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಅದೇ ರೀತಿ ಕೆಕೆಆರ್ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಎರಡು ಅಂಕಪಡೆದುಕೊಂಡು ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಹಾಗೇ ನೋಡಿದ್ರೆ ಕೆಕೆಆರ್ ತಂಡಕ್ಕಿಂತ ರಾಜಸ್ತಾನ ರಾಯಲ್ಸ್ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಆದ್ರೆ ಚುಟುಕು ಕ್ರಿಕೆಟ್ ನಲ್ಲಿ ಏನು ಬೇಕಾದ್ರೂ ಆಗಬಹುದು. ತಂಡಗಳ ಬಲಾಬಲ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಕ್ಷಣ ಮಾತ್ರದಲ್ಲಿ ಪಂದ್ಯದ ಗತಿ ಬದಲಾಯಿಸುವಂತಹ ಸಾಧ್ಯತೆಗಳಿರುವುದರಿಂದ ನಿಖರವಾಗಿ ಯಾವ ತಂಡ ಗೆಲ್ಲುತ್ತೆ ಅಂತ ಹೇಳೋಕೆ ಆಗಲ್ಲ.
ಆದ್ರೂ ರಾಜಸ್ತಾನ ರಾಯಲ್ಸ್ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ನಾಯಕ ಸ್ಟೀವನ್ ಸ್ಮಿತ್, ಜೋಸ್ ಬಟ್ಲರ್ ಉತ್ತಮ ಆರಂಭ ನೀಡಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಸಂಜು ಸಾಮ್ಸನ್ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ರಾಬಿನ್ ಉತ್ತಪ್ಪಗೆ ಮತ್ತೊಂದು ಅವಕಾಶ ಸಿಕ್ಕಿದ್ರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಅದೇ ರೀತಿ ಕಳೆದ ಪಂದ್ಯದ ಹೀರೋ ರಾಹುಲ್ ಟೆವಾಟಿಯಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
#kkr #rajasthan royals #ipl 2020ಇನ್ನು ಬೌಲಿಂಗ್ ನಲ್ಲಿ ಟಾಮ್ ಕುರನ್, ಜೊಫ್ರಾ ಆರ್ಚರ್, ಜಯದೇವ್ ಉನಾದ್ಕಟ್, ಅಂಕಿತ್ ರಜಪೂತ್ ಹಾಗೂ ಶ್ರೇಯಸ್ ಗೋಪಾಲ್ ಕೂಡ ಪರಿಣಮಕಾರಿಯಾಗುತ್ತಿರುವುದು ತಂಡಕ್ಕೆ ಪ್ಲಸ್ ಆಗಿದೆ.
ಇನ್ನು ಕೆಕೆಆರ್ ತಂಡ ಮೇಲ್ನೋಟಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮತೋಲನವಾಗಿಲ್ಲ. ತಂಡ ಆರಂಭಿಕ ಆಟಗಾರನ ಕೊರತೆ ಎದುರಿಸುತ್ತಿದೆ. ಶುಬ್ಮನ್ ಗಿಲ್ ಭರವಸೆ ಮೂಡಿಸಿದ್ರೂ ಸುನೀಲ್ ನರೇನ್ ಬ್ಯಾಟ್ ನಿಂದ ರನ್ ಹರಿದು ಬರುತ್ತಿಲ್ಲ. ಅದೇ ರೀತಿ ನಾಯಕ ದಿನೇಶ್ ಕಾರ್ತಿಕ್ ಲಯಕಂಡುಕೊಳ್ಳಬೇಕಿದೆ. ಇಯಾನ್ ಮೋರ್ಗಾನ್ ಮಾತ್ರ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಿದ್ದಾರೆ. ನಿತೇಶ್ ರಾಣಾ, ಆಂಡ್ರೆ ರಸೇಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು ಬೌಲಿಂಗ್ ನಲ್ಲಿ ಪ್ಯಾಟ್ ಕಮಿನ್ಸ್, ಶಿವಮ್ ಮಾವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ಕಮಲೇಶ್ ನಗಾರ್ಕೊಟಿ ದಿನೇಶ್ ಕಾರ್ತಿಕ್ ಬತ್ತಳಿಕೆಯಲ್ಲಿರುವ ಬೌಲಿಂಗ್ ಅಸ್ತ್ರಗಳು. ಮುಖ್ಯವಾಗಿ ಕೆಕೆಆರ್ ತಂಡಕ್ಕೆ ನರೇನ್ ಮತ್ತು ಕುಲದೀಪ್ ಯಾದವ್ ಸ್ಪಿನ್ ಜಾದು ವರ್ಕ್ ಔಟ್ ಆಗಬೇಕಿದೆ.
ರಾಜಸ್ತಾನ ರಾಯಲ್ಸ್ ಸಂಭವನೀಯ ತಂಡ
ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ಸಂಜು ಸಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ಟೆವಾಟಿಯಾ, ಟಾಮ್ ಕುರನ್, ಜೊಫ್ರಾ ಆರ್ಚೆರ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್, ಜಯದೇವ್ ಉನಾದ್ಕಟ್.
ಕೊಲ್ಕತ್ತಾ ನೈಟ್ ರೈಡರ್ಸ್ ಸಂಭವನೀಯ ತಂಡ
ದಿನೇಶ್ ಕಾರ್ತಿಕ್ (ನಾಯಕ), ಶುಬ್ಮನ್ ಗಿಲ್, ಸುನೀಲ್ ನರೇನ್, ನಿತೇಶ್ ರಾಣಾ, ಇಯಾನ್ ಮೊರ್ಗಾನ್, ಆಂಡ್ರೆ ರಸೇಲ್, ಪ್ಯಾಟ್ ಕಮಿನ್ಸ್, ಶಿವಮ್ ಮಾವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಕಮಲೇಶ್ ನಗಾರ್ಕೋಟಿ.

Related posts

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

June 28, 2026
ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

June 28, 2026
Tags: #dinesh karthik#Rajasthan Royals vs Kolkata Knight RidersIPLIPL 2020Kolkata Knight Ridersrajasthan royalsSteven Smith
ShareTweetSendShare
Join us on:

Related Posts

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

by Shwetha
June 28, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್‌ ಸಂಘಟನೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯೂತ್ ಕಾಂಗ್ರೆಸ್...

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

ಕೇಂದ್ರದ ವಿದೇಶಾಂಗ ನೀತಿಯಿಂದ ಭಾರತಕ್ಕೆ ಹಿನ್ನಡೆ: ಮೋದಿಯವರ ನಡೆಯಿಂದ ಪಾಕಿಸ್ತಾನಕ್ಕೆ ಲಾಭ – ಭಾರತ ತನ್ನ ರಾಜತಾಂತ್ರಿಕ ಪ್ರಭಾವ ಕಳೆದುಕೊಂಡಿದೆ ಎಂದ ಸೋನಿಯಾ ಗಾಂಧಿ

by Shwetha
June 28, 2026
0

ನವದೆಹಲಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಹಾಗೂ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜೊತೆಗಿನ ಸಂಬಂಧದ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಅಸಮಾಧಾನ...

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

ಕಳೆದ 15 ವರ್ಷಗಳ ಪಾಪದ ಲೆಕ್ಕ ಚುಕ್ತಾ ಆಗಲಿದೆ:ಭದ್ರತೆಯಿಲ್ಲದೆ ಬಿಜೆಪಿ ನಾಯಕರು ಓಡಾಡಲಾಗದ ಕಾಲ ಬರಲಿದೆ – ಪವನ್ ಖೇರಾ

by Shwetha
June 28, 2026
0

ಹೊಸದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಭದ್ರತೆಯಿಲ್ಲದೆ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸುವ ಮೂಲಕ ಕಾಂಗ್ರೆಸ್ ಹಿರಿಯ...

ಪ್ರದೀಪ್ ಈಶ್ವರ್ ಮತ್ತೆ ಗೆದ್ದರೆ ಅವರ ಮನೆ ಮುಂದೆ ಸೆಕ್ಯೂರಿಟಿ ಕೆಲಸ ಮಾಡ್ತೀನಿ: ಗಂಡಸ್ತನವಿದ್ರೆ ಸವಾಲ್ ಸ್ವೀಕರಿಸು ಶಾಸಕ ಪ್ರದೀಪ್ ಈಶ್ವರ್ ಗೆ ರವಿಕುಮಾರ್ ಓಪನ್ ಚಾಲೆಂಜ್

ಪ್ರದೀಪ್ ಈಶ್ವರ್ ಮತ್ತೆ ಗೆದ್ದರೆ ಅವರ ಮನೆ ಮುಂದೆ ಸೆಕ್ಯೂರಿಟಿ ಕೆಲಸ ಮಾಡ್ತೀನಿ: ಗಂಡಸ್ತನವಿದ್ರೆ ಸವಾಲ್ ಸ್ವೀಕರಿಸು ಶಾಸಕ ಪ್ರದೀಪ್ ಈಶ್ವರ್ ಗೆ ರವಿಕುಮಾರ್ ಓಪನ್ ಚಾಲೆಂಜ್

by Shwetha
June 28, 2026
0

ಬಿಡದಿ ಟೌನ್‌ಶಿಪ್ ವಿಚಾರವಾಗಿ ಆರಂಭವಾದ ರಾಜಕೀಯ ಜಟಾಪಟಿ ಈಗ ವೈಯಕ್ತಿಕ ಸವಾಲು ಮತ್ತು ಪಂಥಾಹ್ವಾನಗಳ ಹಂತಕ್ಕೆ ತಲುಪಿದೆ. ಸಿಎಂ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ...

ರಿಯಲ್ ಎಸ್ಟೇಟ್ ದಂಧೆಗಾಗಿ ರೈತರ ಭೂಮಿ ಬೇಕೆ: ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ -ಖಾಲಿ ಕುರ್ಚಿ ಬಿಟ್ಟು ಡಿಕೆಶಿಗೆ ಸವಾಲು ಹಾಕಿದ ಹೆಚ್ ಡಿ ಕುಮಾರಸ್ವಾಮಿ

ರಿಯಲ್ ಎಸ್ಟೇಟ್ ದಂಧೆಗಾಗಿ ರೈತರ ಭೂಮಿ ಬೇಕೆ: ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ -ಖಾಲಿ ಕುರ್ಚಿ ಬಿಟ್ಟು ಡಿಕೆಶಿಗೆ ಸವಾಲು ಹಾಕಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 28, 2026
0

ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಭೈರಮಂಗಲದಲ್ಲಿ ನಡೆದ ರೈತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram