ಮಹತ್ವದ ತೀರ್ಪನ್ನು ಪೂರ್ಣ ಹೃದಯದಿಂದ ಸ್ವಾಗತಿಸಿದ್ದೇನೆ – ಎಲ್.ಕೆ.ಅಡ್ವಾಣಿ
ಲಕ್ನೋ, ಸೆಪ್ಟೆಂಬರ್30: 1992 ರ ಬಾಬರಿ ಮಸೀದಿ ಧ್ವಂಸಕ್ಕೆ ಪಿತೂರಿ ನಡೆಸಿದ ಆರೋಪದಿಂದ ಖುಲಾಸೆಗೊಂಡಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಈ ತೀರ್ಪು ರಾಮ ಮಂದಿರ ಚಳವಳಿಯ ಬಗೆಗಿನ ಅವರ ಮತ್ತು ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದಾರೆ.
ನೇಪಾಳದಲ್ಲಿ ಚೀನಾ ವಿರುದ್ಧ ತೀವ್ರಗೊಂಡ ಪ್ರತಿಭಟನೆ
ತೀರ್ಪಿನ ನಂತರ ಅವರು ಜೈ ಶ್ರೀ ರಾಮ್ ಎಂದು ಜಪಿಸಿರುವುದಾಗಿ ತಿಳಿಸಿದ್ದು, ಇದು ನಮ್ಮೆಲ್ಲರಿಗೂ ಸಂತೋಷದ ಕ್ಷಣ ಎಂದು ಹೇಳಿದ್ದಾರೆ.
ಈ ತೀರ್ಪು ನನ್ನ ವೈಯಕ್ತಿಕ ಮತ್ತು ರಾಮ ಜನ್ಮಭೂಮಿ ಚಳವಳಿಯ ಬಗೆಗಿನ ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ ಎಂದು 92 ವರ್ಷದ ಅಡ್ವಾಣಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾನು ಈ ಮಹತ್ವದ ತೀರ್ಪನ್ನು ಪೂರ್ಣ ಹೃದಯದಿಂದ ಸ್ವಾಗತಿಸಿದ್ದೇನೆ ಎಂದು ಹೇಳಿದ ಅವರು ನನ್ನ ಲಕ್ಷಾಂತರ ದೇಶವಾಸಿಗಳ ಜೊತೆಗೆ, ಅಯೋಧ್ಯೆಯಲ್ಲಿ ಸುಂದರವಾದ ರಾಮ ಮಂದಿರವನ್ನು ಪೂರ್ಣಗೊಳ್ಳುವುದನ್ನು ನಾನು ಈಗ ಎದುರು ನೋಡುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಮೂರು ವರ್ಷದ ಬಾಲಕನಿಗೆ ಬುಬೊನಿಕ್ ಪ್ಲೇಗ್ – ಚೀನಾದ ಯುನ್ನಾನ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಶ್ರೀ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ ಸಿಂಗ್ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಪಿತೂರಿ ಆರೋಪದಡಿ ಖುಲಾಸೆಗೊಳಿಸಿರುವ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ 1992 ರ ಡಿಸೆಂಬರ್ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಪೂರ್ವಯೋಜಿತವಲ್ಲ ಎಂದು ಹೇಳಿದೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








