ಹೈದರಾಬಾದ್ : ಇವತ್ತು ಭಾರತ ನ್ಯಾಯಾಂಗದಲ್ಲಿ ಕರಾಳ ದಿನ ಎಂದು ಎಐಎಂಐ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇಂದಿನ ತೀರ್ಪಿನ ಬಗ್ಗೆ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅಲ್ಲಿ ಮಸೀದಿಯನ್ನ ಕೆಡವಲಾಗಿದೆ ಎಂದು ಹೇಳಿದೆ.
ಆದ್ರೆ ಇಂದು ಬಂದ ತೀರ್ಪು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನವಾಗಿ ದಾಖಲೆಯಾಗಲಿದೆ ಎಂದು ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಅಲ್ಲಿ ಮೂರ್ತಿ ತಂದಿಟ್ಟಿದ್ಯಾರು? ಬೀಗ ಮುರಿದಿದ್ದು ಹೇಗೆ? ಮಸೀದಿ ಕೆಡವಿದ್ದು ಹೇಗೆ ಎಂದು ಪ್ರಶ್ನಿಸಿದ ಓವೈಸಿ, ಈ ಎಲ್ಲವನ್ನು ಜಾದೂವಿನ ಮೂಲಕ ಮಾಡಲಾಯಿತಾ?
ದೇಶದ ಇತಿಹಾಸದಲ್ಲಿ ಸೆಪ್ಟೆಂಬರ್ 30 ಕರಾಳ ದಿನವಾಗಿ ಉಳಿಯಲಿದೆ. ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ವೇಳೆ ರಕ್ತದ ಹೊಳೆಯೇ ಹರಿದಿತ್ತು.
ಎಲ್ಲ ಘಟನೆಗಳು ಪೂರ್ವಯೋಜಿತವಾಗಿದ್ರೂ, ಇಂದು ದಿಢೀರ್ ಎಲ್ಲವೂ ಬದಲಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ನಾನು ಈಶ್ವರಪ್ಪ ಉತ್ತಮ ಸ್ನೇಹಿತರು, ಆದ್ರೆ ಸಿದ್ಧಾಂತ ಬೇರೆ : ಸಿದ್ದರಾಮಯ್ಯ
ಸಿಬಿಐ ನ್ಯಾಯಾಲಯದ ತೀರ್ಪು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಕಪ್ಪು ದಿನ.
ಈಗಾಗಲೇ ಬಾಬ್ರಿ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಾನೂನು ನಿಯಮದ ಉಲ್ಲಂಘನೆ ಮಾಡಿದೆ.
ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ ಎಂದಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಮಾಡುವುದನ್ನ ಇಡೀ ದೇಶವೇ ನೋಡಿದೆ. ಆದರೂ ಇದಕ್ಕೆ ಯಾವುದೇ ರೀತಿಯ ಪಿತೂರಿ ನಡೆದಿಲ್ಲ ಎಂದು ವಿಶೇಷ ಕೋರ್ಟ್ ಹೇಳ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ








