ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 86,821 ಮಂದಿಗೆ ಕೊರೋನಾ, 1181 ಸಾವು..!
ನವದೆಹಲಿ: ಇಂದೂ ಕೂಡ ದೇಶಾದ್ಯಂತ ಕಿಲ್ಲರ್ ಕೊರೊನಾ ಮಹಾಮಾರಿಯ ಆರ್ಭಟ ಮುಂದುವರಿದಿದೆ.
ಒಂದೇ ದಿನ 86,820ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 64 ಲಕ್ಷ ಸನಿಹಕ್ಕೆ ತಲುಪಿದೆ.
24 ಗಂಟೆಗಳಲ್ಲಿ ಒಟ್ಟು 1,181 ಮಂದಿ ಕೊರೊನಾ ಮಹಾಮಾರಿಗೆ ಬಲಿ ತೆಗೆಯಾಗಿದ್ದಾರೆ.
ನನಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ? ದಳಪತಿಯ ಸೆಂಟಿಮೆಂಟಲ್ ಟಚ್..!
ಇದರೊಂದಿಗೆ ದೇಶದಲ್ಲಿ ಸಾವಿನ ¸ಸಂಖ್ಯೆ 98,678ಕ್ಕೆ ಏರಿದೆ.
ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 63,12,584ಕ್ಕೇರಿದ್ದು, ಚೇತರಿಕೆ ಪ್ರಮಾಣದಲ್ಲಿಯೂ ಗಣನೀಯವಾಗಿ ಏರಿಕೆಯಾಗಿರುವುದು ಕೊಂಚ ಸಮಾಧಾನ ತರಿಸಿದೆ.
52.73 ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 9,40,705 ಸಕ್ರಿಯ ಕೇಸ್‍ಗಳಿವೆ.








