ಬಳ್ಳಾರಿ : ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನ ಬಂಧಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಬರೋಬ್ಬರಿ 11.40 ಲಕ್ಷ ರೂಪಾಯಿ ಮೌಲ್ಯದ 57 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ..
ಬಳ್ಳಾರಿ ಹಾಗೂ ಆಂಧ್ರ ಮೂಲದ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಈ ಖದೀಮರು ಬಳ್ಳಾರಿಯ ಪ್ರಶಾಂತ್ ನಗರದಲ್ಲಿ ಮಾಲ್ ಸಮೇತ ಸಿಕ್ಕಿಬಿದ್ದರು.
ಆಂಧ್ರ ಪಾಸಿಂಗ್ ನಂಬರ್ ಹೊಂದಿರೋ ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಜಿ.ಆರ್ ಷಣ್ಮುಖಪ್ಪ ನೇತೃತ್ವದ ತಂಡದಿಂದ ದಾಳಿ ನಡೆದಿದೆ.
ಅನಂತಪುರ ಮೂಲದ ಎ.ರಸೂಲ್ ಖಾನ್, ಸಿ.ನಾಗರಾಜ, ಬಳ್ಳಾರಿಯ ಮೊಹಮ್ಮದ್ ಜಾಫರ್, ಎಂ.ರಾಮು, ಜಾಗೃತಿ ನಗರದ ಸೈಯದ್ ಮೊಹಮ್ಮದ್ ಅಜರ್ ಬಂಧಿತ ಆರೋಪಿಗಳಾಗಿದ್ದಾರೆ.
ಇನ್ನೂ ಮತ್ತಿಬ್ಬರು ಆರೋಪಿಗಳಾದ ವೇಣು ನಾಯ್ಡು ಹಾಗೂ ದೌಲ ಎಸ್ಕೇಪ್ ಆಗಿದ್ದಾರೆ.








