ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಗೆ ಕೊರೋನಾ ಸೋಂಕು
ವಾಷಿಂಗ್ಟನ್, ಅಕ್ಟೋಬರ್02: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ.
ತನಗೆ ಮತ್ತು ಮೆಲಾನಿಯಾ ಟ್ರಂಪ್ ಅವರಿಗೆ ಕೊರೊನಾವೈರಸ್ ಸೋಂಕು ದೃಢ ಪಟ್ಟಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ. ಟ್ರಂಪ್ ಟ್ವಿಟರ್ ನಲ್ಲಿ ನನಗೆ ಮತ್ತು ಮೆಲಾನಿಯಾ ಟ್ರಂಪ್ ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ನಾವು ಕ್ವಾರಂಟೈನ್ ಗೆ ಒಳಗಾಗಿದ್ದು, ಆದಷ್ಟು ಬೇಗನೆ ಗುಣಮುಖರಾಗಿ ಹೊರಬರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅವರ ಸಹಾಯಕ ಹೋಪ್ ಹಿಕ್ಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೆಲವು ಗಂಟೆಗಳ ಮೊದಲು ಟ್ರಂಪ್ ಮತ್ತು ಮೆಲಾನಿಯಾ ಕ್ವಾರಂಟೈನ್ ಗೆ ಒಳಗಾಗುವುದಾಗಿ ಘೋಷಿಸಿದ್ದರು. ಇದಾಗಿ ಕೆಲವು ಗಂಟೆಗಳ ಬಳಿಕ ಇವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಂಗಳವಾರ ನಡೆದ ಅಧ್ಯಕ್ಷೀಯ ಚರ್ಚೆಯಲ್ಲಿ ಪಾಲ್ಗೊಳ್ಳಲು ಹಿಕ್ಸ್ ಅವರು ಏರ್ ಫೋರ್ಸ್ ಒನ್‌ನಲ್ಲಿ ಟ್ರಂಪ್ ಮತ್ತು ಮೆಲಾನಿಯಾ ಅವರೊಂದಿಗೆ ಕ್ಲೀವ್ಲ್ಯಾಂಡ್‌ಗೆ ಪ್ರಯಾಣಿಸಿದ್ದರು.
ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ : ಮೋದಿ ನಮನ
ಇಂದು ಬೆಳಿಗ್ಗೆ ಕೂಡ ಟ್ವಿಟರ್‌ನಲ್ಲಿ ಹಿಕ್ಸ್ ಅವರಿಗೆ ಸೋಂಕು ತಗುಲಿರುವ ಸುದ್ದಿಯನ್ನು ಟ್ರಂಪ್ ಖಚಿತಪಡಿಸಿದ್ದರು. ಸಣ್ಣ ವಿರಾಮವನ್ನು ಸಹ ತೆಗೆದುಕೊಳ್ಳದೆ ತುಂಬಾ ಶ್ರಮಿಸುತ್ತಿರುವ ಹೋಪ್ ಹಿಕ್ಸ್ ಅವರಿಗೆ ಕೋವಿಡ್ 19 ದೃಢಪಟ್ಟಿದೆ. ಮೆಲಾನಿಯಾ ಮತ್ತು ನಾನು ನಮ್ಮ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ. ಈ ನಡುವೆ, ನಾವು ನಮ್ಮ ಕ್ವಾರಂಟೈನ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ ಎಂದು ಅವರು ಹೇಳಿದ್ದರು.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ