ಸಚಿವ ಸ್ಥಾನಕ್ಕಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಒತ್ತಡ ಏರಲು ಉತ್ತರ ಕರ್ನಾಟಕದ ಶಾಸಕರು ಸಭೆ ನಡೆಸಿದ್ದಾರೆ ಎನ್ನುವ ವದಂತಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಅತೃಪ್ತ ಶಾಸಕರನ್ನು ಸೇರಿಸಿ ಸಭೆ ನಡೆಸಿಲ್ಲ. ಶಾಸಕರ ಸಭೆ ನಡೆಸುವಷ್ಟು ನಾನು ದೊಡ್ಡ ನಾಯಕನೂ ಅಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಯಾರೂ ಅಭದ್ರಗೊಳಿಸುತ್ತಿಲ್ಲ. ಶಾಸಕರ ಸಭೆ ನಡೆಸಿದ್ದೇನೆ ಎನ್ನುವುದು ಶುದ್ಧ ಸುಳ್ಳು.ಕೆಲವು ಅತೃಪ್ತ ಆತ್ಮಗಳು ಸುಳ್ಳು ವದಂತಿ ಹರಡುತ್ತಿವೆ ಎಂದಿದ್ದಾರೆ.
ಇನ್ನು ಯಡಿಯೂರಪ್ಪನವರೇ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ. ಯಡಿಯೂರಪ್ಪ ಅವರು ಸಮರ್ಥವಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ನೇತೃತ್ವದಲ್ಲಿಯೇ ರಾಜ್ಯ ಸರ್ಕಾರ ಮುಂದುವರಿಯಲಿದೆ ಎನ್ನುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಚೆರ್ಚೆಗೆ ಜೋಶಿ ತೆರೆ ಎಳೆದಿದ್ದಾರೆ.