ಬೇಟಿ ಬಚಾವೊ ಬೇಟಿ ಪಢಾವೊ ಅಭಿಯಾನದಡಿಯಲ್ಲಿ ಬಾಲಕಿಯರಿಗೆ ಸರ್ಕಾರ 2 ಲಕ್ಷ ರೂ. ವಿತರಿಸಲಿದೆಯೇ?
ಹೊಸದಿಲ್ಲಿ, ಅಕ್ಟೋಬರ್03: ಬೇಟಿ ಬಚಾವೊ ಬೇಟಿ ಪಢಾವೊ ಅಭಿಯಾನದಡಿಯಲ್ಲಿ ಬಾಲಕಿಯರಿಗೆ ಸರ್ಕಾರ ತಲಾ 2 ಲಕ್ಷ ರೂ. ವಿತರಿಸಲಿದೆಯೇ?.
ಈ ನಿಟ್ಟಿನಲ್ಲಿ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಜನರನ್ನು ಗೊಂದಲಕ್ಕೀಡು ಮಾಡಿದೆ. ಈ ಫಾರ್ಮ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಜೊತೆಗೆ ‘ಬೇಟಿ ಬಚಾವೊ ಬೇಟಿ ಪಢಾವೊ’ ಅಭಿಯಾನದಡಿ ಸರ್ಕಾರ ಇದನ್ನು ನೀಡುತ್ತಿದೆ ಎಂದು ಹೇಳಿಕೊಂಡಿದೆ.
ಬಿಇಎಲ್ – ಹಿರಿಯ ಸಹಾಯಕ ಎಂಜಿನಿಯರ್ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಈ ಅಭಿಯಾನದಡಿ ಹಣವನ್ನು ಪಡೆಯಲು, ಪೋಷಕರು 8-22 ವರ್ಷದೊಳಗಿನ ತಮ್ಮ ಹೆಣ್ಣುಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದು ಅರ್ಜಿದಾರರ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಹುಟ್ಟಿದ ದಿನಾಂಕ, ಆಧಾರ್ ಸಂಖ್ಯೆ, ಗ್ರಾಂ, ಪೋಸ್ಟ್, , ಜಿಲಾ, ರಾಜ್ಯ, ಪಿನ್, ಮೊಬೈಲ್, ಇ-ಮೇಲ್, ಧರ್ಮ, ಜಾತಿ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ಬ್ಯಾಂಕ್ ಮತ್ತು ಶಾಖೆಯ ಹೆಸರುಗಳನ್ನು ನಮೂದಿಸಬೇಕು. ನೋಂದಾಯಿಸಿಕೊಂಡ ಎಲ್ಲಾ ಹೆಣ್ಣುಮಕ್ಕಳಿಗೆ ತಲಾ 2 ಲಕ್ಷ ರೂ.ಗಳನ್ನು ಸರ್ಕಾರ ನೀಡಲಿದೆ ಎಂದು ಆ ಡಾಕ್ಯುಮೆಂಟ್ ಹೇಳುತ್ತಿದೆ.
ಆದರೆ ಇದು ಎಷ್ಟು ನಿಜ?
ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಸುದ್ದಿಯನ್ನು ಬಲವಾಗಿ ತಳ್ಳಿಹಾಕಿದೆ. ಆ ಪತ್ರಿಕೆಯು ನಕಲಿ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ವಿಂಗ್ ಹೇಳಿದೆ. ಅಂತಹ ಯಾವುದೇ ಸೂಚನೆಗಳನ್ನು ಸರ್ಕಾರ ನೀಡಿಲ್ಲ ಮತ್ತು ಇದು ಕಾನೂನುಬಾಹಿರ ಎಂದು ಅದು ಹೇಳಿದೆ.
दावा: बेटी बचाओ बेटी पढ़ाओ योजना के नाम पर बांटे जा रहे एक फॉर्म में यह दावा किया जा रहा है कि सभी बेटियों को 2 लाख रूपए दिए जायेंगे।#PIBFactCheck: यह फॉर्म फर्जी है। ऐसे किसी भी तरह के फॉर्म का वितरण अवैध है व इस योजना के तहत किसी भी तरह का नगद प्रोत्साहन नहीं दिया जाता है। pic.twitter.com/rQXZX45EUN
— PIB Fact Check (@PIBFactCheck) October 1, 2020
Our Website : https://saakshatv.com/
Subscribe Now on YouTube – https://www.youtube.com/channel/UCJKH.
Like us on Facebook: https://www.facebook.com/saakshatv/
Follow us on Twitter : https://twitter.com/SaakshaTv
Follow us on Instagram : https://www.instagram.com/saaksha_tv/ Subscribe to our Telegram Channel : https://t.me/saakshatv
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ