ಇಂದು ಬಾನಿಗೆಲ್ಲ ಹಬ್ಬ… ಗಾಳಿ ಗಂಧಕ್ಕೂ ಹಬ್ಬ… ಎನ್ನುತ್ತಾ ಕನ್ನಡಿಗರ ಮನ ಗೆದ್ದಿದ್ದ ಚಿತ್ತ ಚೋರಿ ನಟಿ ವರ್ಷ ಅವರು ಈಗ ಹೇಗಿದ್ದಾರೆ ಗೊತ್ತಾ..!
ನೆನಪಿರಲಿ ಸಿನಿಮಾದಲ್ಲಿ ಪ್ರೇಮ್ ಅವರಿಗೆ ನಾಯಕಿಯಾಗಿ ಮಿಂಚಿದ್ದ ವರ್ಷಗೆ ಈ ಚಿತ್ರ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು.
2005ರಲ್ಲಿ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಈ ಚಿತ್ರ ತೆರೆಕಂಡು 15 ವರ್ಷಗಳೇ ಕಳೆದಿದೆ.
ಇದಾದ ಬಳಿಕ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿ ಮನೆಮಾತಾದ ವರ್ಷ ಅವರು ಕೊನೆಯದಾಗಿ ನವಗ್ರಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ನಂತರ ಬರೋಬ್ಬರಿ 12 ವರ್ಷಗಳ ಕಾಲ ಸಿನಿಮಾರಂಗದಿಂದ ವರ್ಷ ದೂರ ಸರಿದಿದ್ದರು.
ಆದ್ರೆ ವರ್ಷ ಬಣ್ಣದ ಜಗತ್ತಿನಿಂದ ದೂರ ಉಳಿಯಲು ಕಾರಣವೇನೆಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ
ಆದ್ರೆ ಇಷ್ಟ ವರ್ಷಗಳ ಬಳಿಕ ಮತ್ತೆ ಬದಲಾದ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬದಲಾದ ಅವತಾರದಲ್ಲಿ ರ್ಶನ ನೀಡಿದ್ದಾರೆ.
ವರ್ಷ ಅವರ ಬದಲಾಗಿರುವ ಲುಕ್ ಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇದೀಗ ವರ್ಷ “ಮಾಮ್ ಅಂಡ್ ಮಿ” ಸಖೀರೀಸ್ ನಲ್ಲಿ ಶಾಲಿನಿ ಜೊತೆಗೆ ನಟಿಸುತ್ತಿದ್ದಾರೆ.
ಈ ಸೀರೀಸ್ ನಲ್ಲಿ ಅಮ್ಮ ಮಗಳ ನಡುವಿನ ಸಂಬಂಧದ ಬಗ್ಗೆ ತೋರಿಸಲಾಗಿ.
ಇನ್ನೂ ಕೆಲವು ಮೂಲಗಳ ಪ್ರಕಾರ ಹಾಗೂ ವರ್ಷ ಅವರ ಬದಲಾದ ರೂಪ ಕಂಡ ಅಭಿಮಾನಿಗಳು , ವರ್ಷ ಅವರು ಅನಾರೋಗ್ಯದಿಂದ ಬಳ್ಳುತ್ತಿದ್ದರು. ಹೀಗಾಗಿಯೇ ಬಣ್ಣದ ಜಗತ್ತಿನಿಂದ ದೂರ ಸರಿದಿದ್ದರು ಎಂದು ಮಾತನಾಡಿಕೊಳ್ತಿದ್ದಾರೆ.








