ADVERTISEMENT
Tuesday, December 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಬಾಳೆ ದಿಂಡಿನ 7 ಪವರ್ ಪ್ಯಾಕ್ಡ್ ಆರೋಗ್ಯ ಪ್ರಯೋಜನಗಳು

admin by admin
October 5, 2020
in Health, Newsbeat, ಆರೋಗ್ಯ, ನ್ಯೂಸ್ ಬೀಟ್
Banana stem health benefits saakshatv
Share on FacebookShare on TwitterShare on WhatsappShare on Telegram

ಬಾಳೆ ದಿಂಡಿನ 7 ಪವರ್ ಪ್ಯಾಕ್ಡ್ ಆರೋಗ್ಯ ಪ್ರಯೋಜನಗಳು 

ಮಂಗಳೂರು, ಅಕ್ಟೋಬರ್04: ಬಾಳೆ ಗಿಡವು ಪೋಷಕಾಂಶಗಳ ಶಕ್ತಿ ಕೇಂದ್ರ. ಬಾಳೆ ಗಿಡದ ಕಾಂಡ(ದಿಂಡು), ಬಾಳೆ ಹಣ್ಣು, ಬಾಳೆ ಕಾಯಿ ನಮ್ಮ ಚಯಾಪಚಯ ವ್ಯವಸ್ಥೆಗೆ ಆರೋಗ್ಯಕರವಾಗಿದೆ.

ನಮ್ಮ ಆರೋಗ್ಯಕರ ಜೀವನಕ್ಕೆ ಬಾಳೆ ದಿಂಡಿನ ಪ್ರಯೋಜನಗಳು ಬಹಳಷ್ಟು.ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಇದನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ.

Related posts

December 16, 2025
ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

December 16, 2025

ಬಾಳೆ ದಿಂಡು ಫೈಬರ್ನಿಂದ ಸಮೃದ್ಧವಾಗಿದೆ. ಅದು ದೇಹದಿಂದ ಅನಗತ್ಯ ವಸ್ತುಗಳನ್ನು ತೆಗೆದುಹಾಕುತ್ತದೆ ಮತ್ತು ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ.

ಮೂತ್ರಪಿಂಡಗಳಿಗೆ ಹಾನಿಮಾಡುವ 5 ಸಾಮಾನ್ಯ ಆಹಾರಗಳು

ಇದು ಜೀರ್ಣಾಂಗವ್ಯೂಹವನ್ನು ಶಮನಗೊಳಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ದೂರವಿರಿಸುತ್ತದೆ. ಬಾಳೆ ದಿಂಡು ಚರ್ಮ ಮತ್ತು ಕೂದಲಿಗೆ ಕೂಡ ಸಾಕಷ್ಟು ಪ್ರಯೋಜನಕಾರಿ.

ಈ ಔಷಧೀಯ ತರಕಾರಿ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿದೆ.

ಕಿಡ್ನಿ ಸ್ಟೋನ್ ಅನ್ನು ತೆಗೆದುಹಾಕುತ್ತದೆ – ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂ ಅಂಶಗಳು ಅಥವಾ ಯೂರಿಕ್ ಆಮ್ಲದಿಂದಾಗಿ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುತ್ತದೆ.

ಬಾಳೆದಿಂಡು ಮೂತ್ರಪಿಂಡಗಳಲ್ಲಿ ರೂಪುಗೊಂಡ ಕಲ್ಲುಗಳನ್ನು ವಿಭಜಿಸುವ ಮೂತ್ರವರ್ಧಕ ಮತ್ತು ಪೊಟ್ಯಾಸಿಯಮ್ ಅಂಶವನ್ನು ಹೊಂದಿರುತ್ತದೆ. ಬಾಳೆದಿಂಡಿನ ರಸವು ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಪರಿಣಾಮಕಾರಿಯಾಗಿದೆ.

ಉತ್ತಮ ಫಲಿತಾಂಶಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು . ಸಿಟ್ರಿಕ್ ಆಮ್ಲವು ಮೂತ್ರಪಿಂಡದ ಕಲ್ಲನ್ನು ಸುಲಭವಾಗಿ ತೆಗೆದುಹಾಕಲು ನೆರವಾಗುತ್ತದೆ.

ಮೂತ್ರದ ಸೋಂಕನ್ನು ದೂರವಿರಿಸುತ್ತದೆ – ಬಾಳೆ ದಿಂಡು ಮೂತ್ರದ ಸೋಂಕನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

ಪೊಟ್ಯಾಸಿಯಮ್, ವಿಟಮಿನ್ ಬಿ 6 ಎಂಬ ಪೋಷಕಾಂಶಗಳು ಮೂತ್ರನಾಳದಲ್ಲಿ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.

ತಕ್ಷಣದ ಪರಿಹಾರ ಪಡೆಯಲು ಸೋಂಕಿನ ಸಮಯದಲ್ಲಿ ಬಾಳೆ ದಿಂಡಿನ ಜ್ಯೂಸ್ ಮಾಡಿ ಕುಡಿಯಿರಿ ಅಥವಾ ಇತರ ಪದಾರ್ಥಗಳೊಂದಿಗೆ ನಿಯಮಿತವಾಗಿ ಬೇಯಿಸಿ ಸೇವಿಸಿ.

ಅತ್ಯುತ್ತಮ ರೋಗನಿರೋಧಕ ಶಕ್ತಿಯ ಈರುಳ್ಳಿ ಚಹಾದ ಮತ್ತಷ್ಟು ಆರೋಗ್ಯ ಪ್ರಯೋಜನಗಳು

ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತದೆ – ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರವು ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ. ಬಾಳೆ ದಿಂಡಿನಲ್ಲಿ ಸಕ್ಕರೆ ಮತ್ತು ಕ್ಯಾಲೋರಿ ಕಡಿಮೆ. ಮಧುಮೇಹ ಜನರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದನ್ನು ಶಿಫಾರಸು ಮಾಡಲಾಗಿದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ – ಬಾಳೆದಿಂಡಿನಲ್ಲಿ ಫೈಬರ್ ಅಧಿಕವಾಗಿದ್ದು, ಮಲಬದ್ಧತೆ ಸುಲಭವಾಗಿ ನಿವಾರಣೆಯಾಗುತ್ತದೆ.

ಹೈಪರ್‌ಸಿಡಿಟಿಯನ್ನು ಕಡಿಮೆ ಮಾಡುತ್ತದೆ – ಈ ತರಕಾರಿಯಲ್ಲಿರುವ ಪೋಷಕಾಂಶಗಳು ನಿಮ್ಮ ದೇಹದಲ್ಲಿನ ಆಮ್ಲ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

ಹೈಪರೇಸಿಡಿಟಿ ಮತ್ತು ಎದೆಯುರಿಗಳಿಂದ ನಿಮ್ಮನ್ನು ಮುಕ್ತಗೊಳಿಸಲು ಬಾಳೆ ದಿಂಡಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಗೋರಿಕಾಯಿ(ಕ್ಲಸ್ಟರ್ ಬೀನ್ಸ್)ನ 7 ಅದ್ಭುತ ‌ಪ್ರಯೋಜನಗಳು

ರಕ್ತಹೀನತೆಯನ್ನು ಗುಣಪಡಿಸುತ್ತದೆ – ಕಡಿಮೆ ಹಿಮೋಗ್ಲೋಬಿನ್ ಸಂಖ್ಯೆ ಹೊಂದಿರುವ ಜನರಿಗೆ ಬಾಳೆದಿಂಡು ಪರಿಣಾಮಕಾರಿಯಾಗಿದೆ. ಕಬ್ಬಿಣ ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿರುವ ಕಾರಣ ಇದು ಆರ್‌ಬಿಸಿ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ದೂರವಿಡಲು ನಿಯಮಿತವಾಗಿ ರಸವಾಗಿ ಸೇವಿಸಿ.

ತೂಕವನ್ನು ಕಡಿಮೆ ಮಾಡುತ್ತದೆ – ಬೇಯಿಸಿದ ಬಾಳೆ ದಿಂಡಿನ ಒಂದು ಕಪ್ ನಿಮಗೆ ಹೆಚ್ಚು ಸಮಯ ಹಸಿವಾಗದಂತೆ ಮಾಡುತ್ತದೆ.

ಇದರಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್ ಇದು ರಕ್ತ ಸಂಚಾರದಲ್ಲಿ ಕೊಬ್ಬು ಮತ್ತು ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಹಸಿವನ್ನು ತಡೆಯುತ್ತದೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸುತ್ತದೆ.

Our Website : https://saakshatv.com/
Subscribe Now on YouTube – https://www.youtube.com/channel/UCJKH.
Like us on Facebook: https://www.facebook.com/saakshatv/
Follow us on Twitter : https://twitter.com/SaakshaTv
Follow us on Instagram : https://www.instagram.com/saaksha_tv/ Subscribe to our Telegram Channel : https://t.me/saakshatv

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

Tags: Banana plantBanana stemHealth tipshealthyHealthy-foodkannada newslatest Kannada newsNamma KarnatakaNews UpdateSaaksha News
ShareTweetSendShare
Join us on:

Related Posts

by admin
December 16, 2025
0

ಅಮಾವಾಸ್ಯೆಯ ರಾತ್ರಿ ಈ ಸ್ಥಳದಲ್ಲಿ ನೀರನ್ನು ಇಡುವುದರಿಂದ ಪೂರ್ವಜರ ಮನಸ್ಸು ಶಾಂತವಾಗುತ್ತದೆ ಮತ್ತು ಪೂರ್ವಜರ ದುಷ್ಟಶಕ್ತಿಗಳು ದೂರವಾಗುತ್ತವೆ. ಪೂರ್ವಜರ ಹೃದಯಗಳು ಶಾಂತವಾಗಲಿ ಮತ್ತು ಪೂರ್ವಜರ ದೋಷವು ನಿವಾರಣೆಯಾಗಲಿ....

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

by Shwetha
December 16, 2025
0

ರಾಜ್ಯ ಸರ್ಕಾರವೂ ಇದೀಗ ಡಿಜಿಟಲ್ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಪಾರದರ್ಶಕ ಜಾಹೀರಾತು ನೀತಿಯನ್ನು ಜಾರಿಗೆ ತಂದಿದೆ. ಡಿಜಿಟಲ್ ಜಾಹೀರಾತು ಮಾರ್ಗಸೂಚಿ–2024 ಅನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ...

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

by Shwetha
December 16, 2025
0

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಮ್ಮ ತಂತ್ರಗಾರಿಕೆಗಳಿಂದಲೇ ಖ್ಯಾತಿ ಗಳಿಸಿದ್ದ ಪ್ರಶಾಂತ್ ಕಿಶೋರ್, ಬಿಹಾರದಲ್ಲಿ ತಮ್ಮ...

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

by Shwetha
December 16, 2025
0

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯ ಬೆನ್ನಲ್ಲೇ ಇದೀಗ ಚುನಾವಣಾ ಸಿದ್ಧತೆಗೆ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಚಾಲನೆ ನೀಡಿದೆ. ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳಲ್ಲಿ ಸ್ಪರ್ಧಿಸಲು...

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

by Shwetha
December 16, 2025
0

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೀಡಿರುವ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram