ಐಪಿಎಲ್ 2020- ವಾಟ್ಸನ್- ಡುಪ್ಲೇಸಸ್ ಆರ್ಭಟಕ್ಕೆ ಶರಣಾದ ಕಿಂಗ್ಸ್ ಇಲೆವೆನ್ ( ipl 2020 Chennai Super Kings )
ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಗೆಲುವಿನ ಟ್ರ್ಯಾಕ್‍ಗೆ ಮರಳಿದೆ. ಸತತ ಮೂರು ಸೋಲಿನಿಂದ ಕಂಗೆಟ್ಟಿದ್ದ ಸಿಎಸ್ ಕೆ ತಂಡ ಅದ್ಭುತ ಪ್ರದರ್ಶನ ನೀಡಿ ಟೀಕೆ ಮಾಡಿದವರಿಗೆ ತಕ್ಕ ಉತ್ತರ ನೀಡಿದೆ. (ipl 2020 Chennai Super Kings )
ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ಧೋನಿ ಬಳಗ 10 ವಿಕೆಟ್ ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿದೆ.
ಗೆಲ್ಲಲು 178 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಸಿಎಸ್‍ಕೆ ತಂಡಕ್ಕೆ ಆರಂಭಿಕರಾದ ಶೇನ್ ವಾಟ್ಸನ್ ಮತ್ತು ಫಾಪ್ ಡುಪ್ಲೆಸಸ್ ಅವರು ಅದ್ಭುತವಾದ ಆಟವನ್ನಾಡಿದ್ರು.
ಕಿಂಗ್ಸ್ ಬೌಲರ್ ಗಳನ್ನು ಮನಬಂದಂತೆ ಕಾಡಿದ ಈ ಜೊಡಿ ಮೊದಲ ವಿಕೆಟ್‍ಗೆ ಅಜೇಯ 181 ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು.
ಶೇನ್ ವಾಟ್ಸನ್ ಅವರು 53 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 83 ರನ್ ಗಳಿಸಿದ್ರೆ, ಫಾಪ್ ಡು ಪ್ಲೇಸಸ್ ಅವರು 53 ಎಸೆತಗಳಲ್ಲಿ ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಅಜೇಯ 87 ರನ್ ದಾಖಲಿಸಿದ್ರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ತಂಡ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು.
ಕಿಂಗ್ಸ್ ಇಲೆವೆನ್ ತಂಡದ ಪರ ನಾಯಕ ಕೆ.ಎಲ್. ರಾಹುಲ್ ಅವರು ಆಕರ್ಷಕ 63 ರನ್ ಗಳಿಸಿದ್ರು. ಹಾಗೇ ಮಯಾಂಕ್ ಅಗರ್ ವಾಲ್ 26 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಮತ್ತೊಂದೆಡೆ, ಮನ್‍ದೀಪ್ ಸಿಂಗ್ 27 ರನ್ ಹಾಗೂ ನಿಕೊಲಾಸ್ ಪೂರನ್ 33 ರನ್ ಗಳಿಸಿದ್ರೆ, ಮ್ಯಾಕ್ಸ್ ವೆಲ್ ಅಜೇಯ 11 ರನ್ ಹಾಗೂ ಸಫ್ರಾಝ್ ಖಾನ್ ಅಜೇಯ 14 ರನ್ ಸಿಡಿಸಿದ್ರು.
ಅದ್ಭುತ ಆಟವನ್ನಾಡಿದ ಶೇನ್ ವಾಟ್ಸನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel