ನವದೆಹಲಿ : ಭಾರತದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇದೀಗ ಹೆಮ್ಮಾರಿ ಕೊರೊನಾ ಸೋಂಕಿತರ ಸಂಖ್ಯೆ 66 ಲಕ್ಷಕ್ಕೆ ಏರಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 74,442 ಪ್ರಕರಣಗಳು ಪತ್ತೆಯಾಗಿದ್ದು, 903 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 66,23,816ಕ್ಕೆ ಏರಿದೆ. ಇನ್ನು 1,02,685 ಮಂದಿ ಮಹಾಮಾರಿ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ಇಸ್ರೋದಿಂದ ಉಚಿತ ಶಿಕ್ಷಣ – ಆನ್‌ಲೈನ್‌ನಲ್ಲಿ ಮೂರು ಹೊಸ ಪದವಿಪೂರ್ವ, ಸ್ನಾತಕೋತ್ತರ ಕೋರ್ಸ್
ದೇಶದ ಒಟ್ಟು 66,23,816 ಮಂದಿ ಕೊರೊನಾ ಸೋಂಕಿತರ ಪೈಕಿ ಇದುವರೆಗೂ 55,86,704 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನುಳಿದಂತೆ 9,34,427 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ.










