ಬೆಂಗಳೂರು: ನನ್ನನ್ನು ಸಿಬಿಐ ಅಧಿಕಾರಿಗಳು ಯಾವಾಗ ಕರೆದರೂ ಹೋಗ್ತೇನೆ. ವಿಚಾರಣೆಗೆ ಹೋಗಲು ಸಿದ್ದನಿದ್ದೇನೆ. ನನ್ನ ವಿರುದ್ಧ ನಡೆಯುತ್ತಿರುವ ತನಿಖೆಗಳು ರಾಜಕೀಯ ಪ್ರೇರಿತ. ಮತದಾರರ ಮುಂದೆ ಹೋಗುತ್ತೇನೆ, ಪಾರದರ್ಶಕವಾಗಿ ಚುನಾವಣಾ ಆಯೋಗ ಕೆಲಸ ಮಾಡಲಿ ಎಂದು ಡಿಕೆಶಿ ಹೇಳಿದ್ದಾರೆ.
ಸಿಬಿಐ ದಾಳಿ ಬಳಿಕ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಸೆ.30ರಂದು ನನ್ನ ಮೇಲೆ ಎಫ್ಐಆರ್ ದಾಖಲು ಮಾಡಿದ್ದೇಕೆ, ಚುನಾವಣೆ ಘೋಷಣೆ ಆದ ಮೇಲೆ, ಪ್ರತಿಭಟನೆಗೆ ಕರೆ ಮಾಡಿದ ಮೇಲೆ ಸಿಬಿಐ ದಾಳಿ ಮಾಡಿದ್ದಾರೆ. ನಾನು ಸಿಬಿಐ ಹೆದರಿ ಓಡಿ ಹೋಗುತ್ತಿರಲಿಲ್ಲ, ನಾನು ಓಡಿ ಹೋಗಲ್ಲ ಐಟಿ, ಸಿಬಿಐ, ಇಡಿ ದಾಳಿ ಯಾವುದೇ ತನಿಖೆ ಮಾಡಿದ್ರೂ ಓಡಿ ಹೋಗಲ್ಲ. ನನ್ನ ರಾಜಕಾರಣದ ಜೀವನದಲ್ಲಿ ಕ್ರಿಮಿನಲ್ ಕೇಸಲ್ಲಿ ಅಪರಾಧಿ ಎಂದು ಸಾಬೀತಾಗಿಲ್ಲ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಕೊಟ್ರೆ ಎದುರಿಸಲು ಸಿದ್ದನಿದ್ದೇನೆ.
ನನ್ನ ಬಳಿಯೂ ಬೇಕಾದಷ್ಟು ದಾಖಲೆಗಳಿವೆ, ಸಂದರ್ಭ ಬಂದಾಗ ಪ್ರಯೋಗ ಮಾಡುತ್ತೇನೆ ಎಂದು ಡಿಕೆಶಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.