ಬಹಳ ತಿಂಗಳುಗಳಿಂದಲೂ ದಕ್ಷಿಣ ಭಾರತದ ಕೆಲ ನಟಿಯರ ಮದುವೆ ವದಂತಿ ತೀವ್ರ ಚರ್ಚೆಯಲ್ಲಿದೆ.
ಆ ನಟಿಯರ ಲಿಸ್ಟ್ ನಲ್ಲಿ ಖ್ಯಾತ ನಟಿ ಕಾಜಲ್ ಅಗರ್ವಾಲ್ ಸಹ ಒಬ್ಬರು. ಕಾಜಲ್ ಗೆ ಈಗಾಗಲೇ ನಿಶ್ಚಿತಾರ್ಥ ಆಗಿದೆ ಎಂದು ಹೇಳಲಾಗುತ್ತಿದೆ.
ಕಾಜಲ್ ನವೆಂಬರ್ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಾಜಲ್ ಮದುವೆ ಆಗಲಿರುವ ಹುಡುಗನ ಚಿತ್ರಗಳನ್ನು ಸಹ ಕೆಲ ಖಾಸಗಿ ಮಾಧ್ಯಮಗಳಲ್ಲಿ ಬಹಿರಂಗಪಡಿಸಲಾಗಿದೆ.
ಮುಂಬೈ ಮೂಲದ ಖ್ಯಾತ ಬ್ಯುಸಿನೆಸ್‌ಮನ್ ಗೌತಮ್ ಕಿಚ್ಲು ಎಂಬುವರೊಂದಿಗೆ ಕಾಜಲ್ ಎಂಗೇಜ್ಮೆಂಟ್ ಆಗಿದೆ ಎಂಬ ಸುದ್ದಿ ಸದ್ಯ ಬಾರೀ ಸದ್ದು ಮಾಡ್ತಿದೆ.
ಮುಂಬೈ ಮೂಲದವರಾದ ಗೌತಮ್ ಕಿಚ್ಲು ‘ಡೈಸೆರ್ನ್ ಲಿವಿಂಗ್’ ಹೆಸರಿನ ಒಳಾಂಗಣ ವಿನ್ಯಾಸದ ಉದ್ಯಮವನ್ನು ಹೊಂದಿದ್ದಾರೆ.
ದೇಶದ ಅತ್ಯುತ್ತಮ ಒಳಾಂಗಣ ವಿನ್ಯಾಸ ಸಂಸ್ಥೆಗಳಲ್ಲಿ ಒಂದು. ಎನ್ನಲಾಗಿದೆ. ಅಷ್ಟೇ ಅಲ್ಲ ಅಂದುಕೊಂಡಿದ್ದ ಹಾಗೆ ಎಲ್ಲವೂ ಆಗಿದ್ರೆ ಈಗಾಗಲೇ ಅವರಿಬ್ಬರ ಮದುವೆ ನಿಶ್ಚಯವಾಗಬೇಕಿಂತಂತೆ.

ಆದರೇ ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿತ್ತು ಎಂಬ ವದಂತಿಗಳೂ ಇವೆ. ಕನ್ನಡದ ತಥಾಸ್ತು ಸೇರಿ ಅನೇಕ ಸಿನೆಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಕಾಜಲ್ ಅವರ ಮದುವೆ ವದಂತಿಗೆ ಖುದ್ದು ಕಾಜಲ್ ಅವರೇ ಬ್ರೇಕ್ ಹಾಕುವರೆಗೂ ಯಾವುದನ್ನೂ ಖಚಿತವಾಗಿ, ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.








