ಬೀದರ್: ಶಾಲೆಗಳಿಗೆ ಹೋಗಬೇಕಾದ ಪುಟ್ಟ ಮಕ್ಕಳನ್ನು ಹಣದ ಆಮಿಷವೊಡ್ಡಿ ಮಕ್ಕಳನ್ನು ಜಮೀನಿಗೆ ಶಿಕ್ಷಕಿಯೇ ಕರೆದೊಯ್ದ ಆರೋಪ ಬೀದರ್ ನಲ್ಲಿ ಕೇಳಿ ಬಂದಿದೆ.
ನೂತನ ತಾಲೂಕು ಕೇಂದ್ರವಾಗಿರುವ ಬೀದರ್ ಜಿಲ್ಲೆಯ ಹುಲಸೂರು ಪಟ್ಟಣದ ಶಿಕ್ಷಕಿಯಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.
ಹುಲಸೂರ ಪಟ್ಟಣದ ಸಂತ ರಘುನಾಥ ಮಹಾರಾಜ ಪ್ರೌಢಶಾಲೆಯ ಸಹ ಶಿಕ್ಷಕಿ ಮೋಹನಬಾಯಿ ಝಕಾಡೆ ವಿರುದ್ಧ ಶಾಲಾ ಮಕ್ಕಳನ್ನು ಕೂಲಿಗೆ ಕರೆದೊಯ್ದ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ
ದಿನ ಒಂದಕ್ಕೆ 300 ರೂಪಾಯಿ ಕೂಲಿ ಆಮಿಷ ನೀಡಿ 10ನೇ ತರಗತಿ ಮಕ್ಕಳಿಂದ ಹೊಲದಲ್ಲಿ ಸೋಯಾ ಬೆಳೆ ಕೀಳಿಸುವ ಕೆಲಸ ಮಾಡಿಸಲಾಗುತ್ತಿದೆ. 8 ಜನ ಮಕ್ಕಳನ್ನು ಜಮೀನಿಗೆ ಕರೆದೊಯ್ದ ಶಿಕ್ಷಕಿ ಮೋಹನಬಾಯಿ ಝಕಾಡೆ, ಜಮೀನಿನಲ್ಲಿ ಕೂಲಿಯಾಳುಗಳ ರೀತಿ ಕೆಲಸ ಮಾಡಿಸುತ್ತಿದ್ದಾರಂತೆ. ..
ಶಿಕ್ಷಕಿ ಪತಿ ಮೇಲ್ವಿಚಾರಕನಾಗಿ ಈ ಮಕ್ಕಳನ್ನು ಜಮೀನಿನಲ್ಲಿ ದುಡಿಸಿಕೊಳ್ಳುತ್ತಿದ್ದಾನಂತೆ. ಪೊಷಕರ ಆಕ್ರೋಶ ವ್ಯಕ್ತಪಡಿಸಿದರೂ ಟೀಚರ್ ಪತಿ ಕ್ಯಾರೇ ಅನ್ನುತ್ತಿಲ್ಲವಂತೆ. ಅದೇನು ಮಾಡ್ಕೋತಿರೋ ಮಾಡಿಕೊಳ್ಳಿ ಅಂತ ದರ್ಪದಿಂದ ಮಾತನಾಡುತ್ತಿದ್ದು, ಈ ಘಟನೆಯ ದೃಷ್ಯಗಳನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಬಿಇಒ ಹಾಗೂ ಸಿಡಿಪಿಒ ಭೇಟಿ ನೀಡಿ ಜಿಲ್ಲಾ ಶಿಕ್ಷಣಾಧಿಕಾರಿಗೆ ವರದಿ ರವಾನಿಸಿದ್ದಾರೆ. ಈಗಲಾದರೂ ಅಧಿಕಾರಿಗಳು ಶಾಲಾ ಮಕ್ಕಳನ್ನು ಕೂಲಿ ದಂಧೆಗೆ ಕಡಿವಾಣ ಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.