ಕೇರಳ ವಿದ್ಯುತ್ ಸಚಿವ ಎಂ.ಎಂ.ಮಣಿಗೆ ಕೊರೋನಾ ಸೋಂಕು ( covid19 MM Mani )
ತಿರುವನಂತಪುರಂ, ಅಕ್ಟೋಬರ್07: ಕೇರಳ ವಿದ್ಯುತ್ ಸಚಿವ ಎಂ.ಎಂ.ಮಣಿ ಅವರಿಗೆ ಬುಧವಾರ ಕೋವಿಡ್ -19 ಸೋಂಕು ದೃಢಪಟ್ಟಿದೆ. ( covid19 MM Mani )
ಇವರು ಕೊರೋನಾ ಸೋಂಕು ದೃಢಪಟ್ಟ ಪಿಣರಾಯಿ ವಿಜಯನ್ ಸಂಪುಟದ ನಾಲ್ಕನೇ ಸಚಿವರಾಗಿದ್ದಾರೆ. ಸ್ವತಃ ಫೇಸ್‌ಬುಕ್ ನಲ್ಲಿ ಪೋಸ್ಟ್ ಮೂಲಕ ತಮಗೆ ಸೋಂಕು ದೃಢಪಟ್ಟಿರುವ ಮಾಹಿತಿಯನ್ನು ಸಚಿವರು ನೀಡಿದ್ದಾರೆ.
2000 ಕೋಟಿ ಮೌಲ್ಯದ ಶಶಿಕಲಾ ಅವರ ಆಸ್ತಿಯನ್ನು ವಶಪಡಿಸಿಕೊಂಡ ಆದಾಯ ತೆರಿಗೆ ಇಲಾಖೆ
75 ವರ್ಷದ ಸಚಿವರನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಅವರೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಣಿ ವಿನಂತಿಸಿದ್ದಾರೆ.
ಇದಕ್ಕೂ ಮೊದಲು ಥಾಮಸ್ ಐಸಾಕ್ (ಹಣಕಾಸು), ಇಪಿ ಜಯರಾಜನ್ (ಕೈಗಾರಿಕೆಗಳು) ಮತ್ತು ವಿ ಎಸ್ ಸುನಿಲ್ ಕುಮಾರ್ (ಕೃಷಿ) ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿತ್ತು. ಅವರೆಲ್ಲರೂ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ