ರಾಜೇಶ್ವರ ರಾವ್ ಅವರು ಹೊಸ ಆರ್ಬಿಐ ಉಪ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
( Rajeshwar Rao )
ಹೊಸದಿಲ್ಲಿ, ಅಕ್ಟೋಬರ್08: ಎಂ.ರಾಜೇಶ್ವರ ರಾವ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಉಪ ಗವರ್ನರ್ ಆಗಿ ಸರ್ಕಾರ ಬುಧವಾರ ನೇಮಕ ಮಾಡಿದೆ. ( Rajeshwar Rao )
ರಾಜೇಶ್ವರ ರಾವ್ ಪ್ರಸ್ತುತ ಕೇಂದ್ರ ಬ್ಯಾಂಕಿನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉಪ ಗವರ್ನರ್ ಹುದ್ದೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ರಾಜೇಶ್ವರ ರಾವ್ ಅವರನ್ನು ನೇಮಕ ಮಾಡಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಸೂಚನೆ ತಿಳಿಸಿದೆ.
ಎನ್.ಎಸ್ ವಿಶ್ವನಾಥನ್ ನಿವೃತ್ತರಾದ ನಂತರ ಆರು ತಿಂಗಳ ಕಾಲ ಈ ಹುದ್ದೆ ಖಾಲಿ ಇತ್ತು. ಮಾರ್ಚ್ 31 ರಂದು ಎನ್.ಎಸ್ ವಿಶ್ವನಾಥನ್ ನಿವೃತ್ತರಾಗಿದ್ದರು.
ಸಿಬಿಐನ ಮಾಜಿ ನಿರ್ದೇಶಕ ಮತ್ತು ನಾಗಾಲ್ಯಾಂಡ್ನ ಮಾಜಿ ಗವರ್ನರ್ ಅಶ್ವನಿ ಕುಮಾರ್ ಆತ್ಮಹತ್ಯೆ
ಎಂ.ರಾಜೇಶ್ವರ ರಾವ್ ಅವರು 1984 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ನೊಂದಿಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. 2016 ರಲ್ಲಿ ಅವರು ಕೇಂದ್ರ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ಪ್ರಸ್ತುತ, ರಾವ್ ಅವರು ಕೇಂದ್ರೀಯ ಬ್ಯಾಂಕಿನಲ್ಲಿ ಆಂತರಿಕ ಸಾಲ ನಿರ್ವಹಣೆ, ಹಣಕಾಸು ಮಾರುಕಟ್ಟೆಗಳ ಕಾರ್ಯಾಚರಣೆಗಳು, ಅಂತರರಾಷ್ಟ್ರೀಯ ಮತ್ತು ಸೆಕ್ರೆಟರಿಯಲ್ ವಿಭಾಗಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಅವರು ನವದೆಹಲಿಯ ಬ್ಯಾಂಕಿಂಗ್ ಓಂಬುಡ್ಸ್ಮನ್ ಮತ್ತು ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ನವದೆಹಲಿಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳಲ್ಲಿಯೂ ಕೆಲಸ ಮಾಡಿದ್ದಾರೆ.
ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿ.ಎ) ಮತ್ತು ಕೊಚ್ಚಿನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪಡೆದಿದ್ದಾರೆ.
ರಾವ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ನ ಸರ್ಟಿಫಿಕೇಟೆಡ್ ಅಸೋಸಿಯೇಟ್ ಕೂಡ ಆಗಿದ್ದಾರೆ.
ಆರ್ಬಿಐ ಕಾಯ್ದೆ, 1934 ರ ಪ್ರಕಾರ, ಕೇಂದ್ರೀಯ ಬ್ಯಾಂಕ್ಗೆ ನಾಲ್ಕು ಉಪ ಗವರ್ನರ್ಗಳನ್ನು ಹೊಂದಿರಬೇಕು.
ಇಬ್ಬರು ಶ್ರೇಣಿಯೊಳಗಿನವರು, ಒಬ್ಬ ವಾಣಿಜ್ಯ ಬ್ಯಾಂಕರ್ ಮತ್ತು ಇನ್ನೊಬ್ಬರು ಹಣಕಾಸು ನೀತಿ ವಿಭಾಗದ ಮುಖ್ಯಸ್ಥರಾಗಿರುತ್ತಾರೆ.
ಕೇರಳ ವಿದ್ಯುತ್ ಸಚಿವ ಎಂ.ಎಂ.ಮಣಿಗೆ ಕೊರೋನಾ ಸೋಂಕು
ಸದ್ಯ ಆರ್ಬಿಐ ನಲ್ಲಿ ಇತರ ಮೂವರು ಉಪ ಗವರ್ನರ್ ಗಳಾದ ಬಿ ಪಿ ಕನುಂಗೊ, ಎಂ ಕೆ ಜೈನ್ ಮತ್ತು ಮೈಕೆಲ್ ಡೆಬಬ್ರತಾ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೀಗ ಡೆಪ್ಯೂಟಿ ಗವರ್ನರ್ ನೇಮಕಾತಿಗಳನ್ನು ಮೂರು ವರ್ಷಗಳ ಆರಂಭಿಕ ಅವಧಿಗೆ ಮಾಡಲಾಗಿದ್ದು ಮರು ನೇಮಕಾತಿಗೆ ಅರ್ಹನಾಗಿರುತ್ತಾರೆ. ಇವರಿಗೆ ತಿಂಗಳಿಗೆ 2.25 ಲಕ್ಷ ರೂ. ನಿಗದಿತ ವೇತನ ಮತ್ತು ಭತ್ಯೆ ಸಿಗುತ್ತದೆ.










