ಅತಿ ಹೆಚ್ಚು ವಿದ್ಯಾವಂತ ಕೈದಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ Educated prisoners
ಹೊಸದಿಲ್ಲಿ, ಅಕ್ಟೋಬರ್09:ಉತ್ತರ ಪ್ರದೇಶದ ಕಾರಾಗೃಹಗಳಲ್ಲಿ ಎಂಜಿನಿಯರಿಂಗ್ ಅಥವಾ ಸ್ನಾತಕೋತ್ತರ ಪದವಿ ಹೊಂದಿರುವ ಕೈದಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ( Educated prisoners )
ಈ ಬಗ್ಗೆ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಮಾಹಿತಿ ಬಿಡುಗಡೆ ಮಾಡಿದೆ.
ಉತ್ತರ ಪ್ರದೇಶದ ನಂತರ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಕೈದಿಗಳಿದ್ದು, ಅವರಲ್ಲಿ ಕೂಡ ಎಂಜಿನಿಯರಿಂಗ್ ಅಥವಾ ಸ್ನಾತಕೋತ್ತರ ಪದವಿಗಳನ್ನು ಪಡೆದಿರುವವರು ಇದ್ದಾರೆ.
ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿನ ಜೈಲುಗಳಲ್ಲಿ ಸಹ ಅತಿ ಹೆಚ್ಚು ವಿದ್ಯಾವಂತ ಕೈದಿಗಳಿದ್ದಾರೆ.
ಎಂಜಿನಿಯರಿಂಗ್ ವಿಷಯದಲ್ಲಿ ತಾಂತ್ರಿಕ ಪದವಿ ಅಥವಾ ಡಿಪ್ಲೊಮಾ ಪಡೆದ 3,740 ಕೈದಿಗಳಲ್ಲಿ, 727 ಅಥವಾ ಪ್ರತಿಶತ 20 ಉತ್ತರ ಪ್ರದೇಶದ ಜೈಲುಗಳಲ್ಲಿ ದಾಖಲಾಗಿದ್ದಾರೆ.
ಎಂಜಿನಿಯರಿಂಗ್ ಪದವಿ ಪಡೆದ ಕೈದಿಗಳಲ್ಲಿ ಮಹಾರಾಷ್ಟ್ರದ 495 ಕೈದಿಗಳಿದ್ದಾರೆ. ಕರ್ನಾಟಕ ಜೈಲುಗಳಲ್ಲಿ ಅಂತಹ 362 ಕೈದಿಗಳಿದ್ದಾರೆ. ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದ ಜೈಲುಗಳು ನಂತರದ ಸ್ಥಾನಗಳಲ್ಲಿ ಇದ್ದಾರೆ.
ದೇಶಾದ್ಯಂತ ಸ್ನಾತಕೋತ್ತರ ಪದವಿ ಪಡೆದ ಒಟ್ಟು 5,282 ಕೈದಿಗಳಲ್ಲಿ ಯುಪಿ ಜೈಲುಗಳಲ್ಲಿ 2,010, ಮಹಾರಾಷ್ಟ್ರದ ಕಾರಾಗೃಹಗಳಲ್ಲಿ 562 ಕೈದಿಗಳಿದ್ದಾರೆ. ಕರ್ನಾಟಕದಾದ್ಯಂತ ಜೈಲುಗಳಲ್ಲಿ 120 ಸ್ನಾತಕೋತ್ತರ ಪದವಿ ಪಡೆದಿರುವ ಕೈದಿಗಳಿದ್ದಾರೆ.
ಅಕ್ಟೋಬರ್ 10 ರಿಂದ ರೈಲ್ವೆ ಇಲಾಖೆಯಲ್ಲಿ ಹೊಸ ಬದಲಾವಣೆಗಳು – ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ:
ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಭಾರತದಾದ್ಯಂತ ಜೈಲುಗಳಲ್ಲಿರುವ 3,30,487 ಕೈದಿಗಳಲ್ಲಿ, ಸ್ನಾತಕೋತ್ತರ ಪದವೀಧರರು ಶೇಕಡಾ 1.67 ರಷ್ಟಿದ್ದರೆ, 1.2 ಪ್ರತಿಶತ ಎಂಜಿನಿಯರ್‌ಗಳಿದ್ದಾರೆ.
ಉತ್ತರ ಪ್ರದೇಶದಲ್ಲಿ, ವಿದ್ಯಾವಂತ ಕೈದಿಗಳಲ್ಲಿ ಹಲವರು ಅತ್ಯಾಚಾರ ಮತ್ತು ವರದಕ್ಷಿಣೆ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರ ಕೌಶಲ್ಯಗಳನ್ನು ಜೈಲುಗಳ ಒಳಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ.
ಎಂಜಿನಿಯರಿಂಗ್ ಅಥವಾ ತಾಂತ್ರಿಕ ಹಿನ್ನೆಲೆ ಹೊಂದಿರುವ ಕೈದಿಗಳು ಜೈಲುಗಳಲ್ಲಿ ತಂತ್ರಜ್ಞಾನವನ್ನು ನವೀಕರಿಸಲು ಸಹಾಯ ಮಾಡುತ್ತಾರೆ.
ಉದಾಹರಣೆಗೆ, ಅನೇಕ ಪ್ರತಿಭಾವಂತ ಎಂಜಿನಿಯರ್‌ಗಳು ಜೈಲಿನಲ್ಲಿ ಇ-ಜೈಲು ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇತರರು ಜೈಲು ದಾಸ್ತಾನು ವ್ಯವಸ್ಥೆಯನ್ನು ಗಣಕೀಕರಣಗೊಳಿಸಲು ಸಹಾಯ ಮಾಡಿದ್ದಾರೆ. ಆವರಣದಲ್ಲಿ ಜೈಲು ರೇಡಿಯೊಗಳ ಸ್ಥಾಪನೆಯಲ್ಲಿ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ.
ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿಯ ಟಿಆರ್ ಪಿಯಲ್ಲಿ ಭಾರೀ ಗೋಲ್ ಮಾಲ್ – ಮುಂಬೈ ಪೋಲಿಸರ ಆರೋಪ
ಎಷ್ಟೋ ಮಂದಿ ಶಿಕ್ಷಕರಾಗಿ ಬದಲಾಗಿದ್ದು, ಇ-ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಯುಪಿಯ ಕಾರಾಗೃಹ ಮಹಾನಿರ್ದೇಶಕ (ಡಿಜಿ) ಆನಂದ್ ಕುಮಾರ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ