ಶಾಲೆ ಪುನರಾರಂಭ : ರಾಜ್ಯವಾರು ನಿರ್ಧಾರಗಳ ಮಾಹಿತಿ ಇಲ್ಲಿದೆ
states reopen school
ಹೊಸದಿಲ್ಲಿ, ಅಕ್ಟೋಬರ್10: ಕೇಂದ್ರದ ಅನ್ಲಾಕ್ 5 ಮಾರ್ಗಸೂಚಿಗಳಿಗೆ ಅನುಗುಣವಾಗಿ, ಅಕ್ಟೋಬರ್ 15 ರ ನಂತರ ಹಲವಾರು ರಾಜ್ಯಗಳು ಶಾಲೆಗಳನ್ನು ಶ್ರೇಣೀಕೃತ ರೀತಿಯಲ್ಲಿ ತೆರೆಯಲು ನಿರ್ಧರಿಸಿದೆ. ( states reopen school )
ಕೇಂದ್ರ ಸರ್ಕಾರವು ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು, ಶಾಲೆಗಳನ್ನು ತೆರೆಯಲು ರಾಜ್ಯಗಳಿಗೆ ಅನುಮತಿ ನೀಡಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಗಳನ್ನು ಸಹ ಹೊರಡಿಸಿದೆ., ಶಾಲೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರಗಳು ನಿರ್ಧರಿಸಿದಲ್ಲಿ ಅವುಗಳನ್ನು ಅನುಸರಿಸಬೇಕಾಗುತ್ತದೆ.
ಸ್ವಿಸ್ ಬ್ಯಾಂಕ್ ಖಾತೆ ವಿವರಗಳ ಎರಡನೇ ಮಾಹಿತಿ ಪಟ್ಟಿ ಭಾರತಕ್ಕೆ ರವಾನೆ
ವಿದ್ಯಾರ್ಥಿಗಳು ಶಾಲೆಗೆ ಬರಬಹುದು ಆದರೆ ಅವರಿಗೆ ಅವರ ಪೋಷಕರ ಲಿಖಿತ ಒಪ್ಪಿಗೆ ಬೇಕಾಗುತ್ತದೆ.
ವಿದ್ಯಾರ್ಥಿಗಳು ಶಾಲೆಗಳಿಗೆ ಬರದಂತೆ ನಿರ್ಧರಿಸಿದರೆ ಆನ್‌ಲೈನ್ ಕಲಿಕೆಗೆ ಇನ್ನೂ ಪ್ರೋತ್ಸಾಹ ನೀಡಲಾಗುವುದು ಎಂದು ಮಾರ್ಗಸೂಚಿಗಳು ತಿಳಿಸಿವೆ.
ಆದರೆ, ಇತ್ತೀಚಿನ ದಿನಗಳಲ್ಲಿ ನಡೆಸಲಾದ ಹಲವಾರು ಸಮೀಕ್ಷೆಗಳು ಪೋಷಕರು ತಮ್ಮ ಮಕ್ಕಳನ್ನು ಇನ್ನೂ ಶಾಲೆಗಳಿಗೆ ಕಳುಹಿಸಲು ಬಯಸುತ್ತಿಲ್ಲ ಎಂದು ತಿಳಿಸಿದೆ.
ಸಮೀಕ್ಷೆಯೊಂದರ ಪ್ರಕಾರ, ಶೇಕಡಾ 71 ರಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಸಿದ್ಧರಿಲ್ಲ.
ಸಾಮಾನ್ಯ ತರಗತಿಗಳ ಪುನರಾರಂಭದ ಕುರಿತು ರಾಜ್ಯವಾರು ನಿರ್ಧಾರಗಳು ಇಲ್ಲಿವೆ :
ಕರ್ನಾಟಕ: ಪೋಷಕರ ಒತ್ತಡಕ್ಕೆ ಮಣಿದ ಕರ್ನಾಟಕ ಸರ್ಕಾರ, ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರಕ್ಕೆ ಆತುರವಿಲ್ಲ ಎಂದು ಹೇಳಿದೆ.
ಕೋವಿಡ್ -19 ಸಿದ್ಧತೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸಾಂಕ್ರಾಮಿಕದ ಮಧ್ಯೆ ನಾವು ಖಂಡಿತವಾಗಿಯೂ ಶಾಲೆಯನ್ನು ತೆರೆಯುವ ಆತುರದಲ್ಲಿಲ್ಲ ಎಂದು ಹೇಳಿದ್ದಾರೆ.
ಪಾಪಿ ಪಾಕ್ ಗೆ ಯುದ್ಧ ವಿಮಾನಗಳ ರಹಸ್ಯ ಮಾಹಿತಿ ಒದಗಿಸುತ್ತಿದ್ದ ಎಚ್ಎಎಲ್ ಉದ್ಯೋಗಿ ಬಂಧನ
ತೆಲಂಗಾಣ: ತೆಲಂಗಾಣ ಸರ್ಕಾರ ‘ಅನ್ಲಾಕ್ 5’ ಅಡಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದರೂ ಶಾಲೆಗಳು ಮತ್ತು ಚಿತ್ರಮಂದಿರಗಳನ್ನು ಪುನಃ ತೆರೆಯುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.
ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಹೊರಡಿಸಿರುವ ಸರ್ಕಾರಿ ಆದೇಶ (ಜಿಒ) ಪ್ರಕಾರ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳು ತೆರೆಯುವ ದಿನಾಂಕಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ನೀಡಲಾಗುವುದು.
ದೆಹಲಿ: ದೆಹಲಿಯಲ್ಲಿ ಶಾಲೆಗಳನ್ನು ತೆರೆಯದಿರುವ ನಿರ್ಧಾರ ಮುಂದುವರಿಯುತ್ತದೆ. ಅಕ್ಟೋಬರ್ 31 ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ನಾನು ಸೂಚನೆ ನೀಡಿದ್ದೇನೆ.
ಇದಕ್ಕಾಗಿ ಆದೇಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಆಂಧ್ರಪ್ರದೇಶ: ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ನವೆಂಬರ್ 2 ರವರೆಗೆ ಸಾಮಾನ್ಯ ತರಗತಿಗಳನ್ನು ಪುನರಾರಂಭಿಸದಿರಲು ನಿರ್ಧರಿಸಿದೆ.
ದೇಶದಲ್ಲಿ ಸುಮಾರು 93,500 ಡಾಟಾ ಸೈಂಟಿಸ್ಟ್ ಉದ್ಯೋಗವಕಾಶಗಳು
ರಾಜಸ್ಥಾನ: ರಾಜಸ್ಥಾನ ಸರ್ಕಾರವು ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆ ಸಮಯವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ. ಶಿಬಿರ ಕಾರ್ಯಕ್ರಮಕ್ಕೆ ಭಾಗಶಃ ತಿದ್ದುಪಡಿ ಮಾಡುವ ಮೂಲಕ ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ.
ರಾಜ್ಯ ಸರ್ಕಾರಿ ಶಾಲೆಗಳ ಪುನರಾರಂಭ ಸಮಯ ಬದಲಾವಣೆ ಮಾಡಲಾಗಿದ್ದು, ಈಗ ನವೆಂಬರ್ 1 2020 ರಿಂದ ಆಗಲಿದೆ ಎಂದು ರಾಜ್ಯ ಶಿಕ್ಷಣ ಸಚಿವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ನವೆಂಬರ್ ಮಧ್ಯದವರೆಗೆ ಶಾಲೆಗಳನ್ನು ತೆರೆಯದಿರಲು ನಿರ್ಧರಿಸಿದೆ.
ಮಹಾರಾಷ್ಟ್ರ: ಸಾಮಾನ್ಯ ತರಗತಿಗಳ ಪುನರಾರಂಭವನ್ನು ಈ ತಿಂಗಳ ಅಂತ್ಯದವರೆಗೆ ಮುಂದೂಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಹೋಂ ಕ್ವಾರಂಟೈನ್ ಗೆ ಒಳಪಟ್ಟವರಿಗೆ ಇಲ್ಲಿದೆ ವೈದ್ಯರ ಸಲಹೆ
ತಮಿಳುನಾಡು: ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ನಾವು ಇದೀಗ ಗಮನಹರಿಸಿದ್ದೇವೆ. ಶಿಕ್ಷಣ, ಆರೋಗ್ಯ ಮತ್ತು ಇತರ ಇಲಾಖೆಗಳೊಂದಿಗೆ ಚರ್ಚಿಸಿದ ನಂತರ ಶಾಲೆಗಳು ಯಾವಾಗ ಪುನರಾರಂಭಗೊಳ್ಳುತ್ತವೆ ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದು ತಮಿಳು ನಾಡು ಶಿಕ್ಷಣ ಸಚಿವರು ಹೇಳಿದ್ದಾರೆ.
ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಅಕ್ಟೋಬರ್ 15 ರಿಂದ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಶ್ರೇಣೀಕೃತ ರೀತಿಯಲ್ಲಿ ತೆರೆಯಲು ಚಿಂತನೆ ನಡೆಸಿದೆ.
ಪಂಜಾಬ್: ಪಂಜಾಬ್ ಸರ್ಕಾರ ನೀಡಿರುವ ಹೊಸ ಅಧಿಸೂಚನೆಯ ಪ್ರಕಾರ, ಆರಂಭದಲ್ಲಿ 9 ರಿಂದ 12 ನೇ ತರಗತಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರತಿ ವಿಭಾಗಕ್ಕೆ 20 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ.
ಹರಿಯಾಣ: ಅಕ್ಟೋಬರ್ 15 ರಿಂದ ಶ್ರೇಣೀಕೃತ ರೀತಿಯಲ್ಲಿ ಶಾಲೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ.
ಕೇಂದ್ರದ ನಿರ್ಧಾರಕ್ಕೆ ಅನುಗುಣವಾಗಿ, ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲು ಹರಿಯಾಣ ಸರ್ಕಾರ ಚಿಂತಿಸುತ್ತಿದೆ.
ಎಲ್ಲವೂ ಯೋಜನೆಗಳಂತೆ ನಡೆದರೆ, ಈ ತರಗತಿಗಳ ವಿದ್ಯಾರ್ಥಿಗಳು ಅಕ್ಟೋಬರ್ 15 ರಿಂದ ತಮ್ಮ ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಶಿಕ್ಷಣ ಸಚಿವ ಕನ್ವರ್ ಪಾಲ್ ಹೇಳಿದರು.