ತಂದೆಯಿಂದ ಅಪಾರ ಪ್ರಮಾಣದ ಹಣವನ್ನು ಸುಲಿಗೆ ಮಾಡಲು ತನ್ನದೇ ಅಪಹರಣ ಯೋಜಿಸಿದ 14 ವರ್ಷದ ಬಾಲಕ boy kidnapping
ಚೆನ್ನೈ, ಅಕ್ಟೋಬರ್12: ತಮಿಳಿನ ಕ್ರೈಮ್ ಹಾಸ್ಯ ಚಿತ್ರದಲ್ಲಿ ಸೂಧು ಕವ್ವುಮ್ ಎಂಬ ಪಾತ್ರದ ಅರುಮೈ ತನ್ನ ತಂದೆಯಿಂದ ಹಣ ಪಡೆಯಲು ತನ್ನದೇ ಅಪಹರಣವನ್ನು ಯೋಜಿಸುವ ದೃಶ್ಯವಿದೆ. ( boy kidnapping )
ಅದೇ ರೀತಿಯಲ್ಲಿ 14 ವರ್ಷದ ಬಾಲಕ ತನ್ನ ತಂದೆಯಿಂದ ಹಣವನ್ನು ಸುಲಿಗೆ ಮಾಡಲು ಅಪಕರಣದ ಕಥೆ ಕಟ್ಟಿದ ಘಟನೆ ಚೆನ್ನೈನಲ್ಲಿ ನಡೆದಿದೆ.
9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನ ತಂದೆಗೆ ಕರೆ ಮಾಡಿ ಅಪರಿಚಿತ ವ್ಯಕ್ತಿಗಳಿಂದ ತಾನು ಅಪಹರಿಸಲ್ಪಟ್ಟಿದ್ದೇನೆ. ಅವರು 10 ಲಕ್ಷ ರೂ.ಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಪರಿಕರಗಳ ಅಂಗಡಿಯನ್ನು ಹೊಂದಿರುವ ಬಾಲಕನ ತಂದೆ ಕೂಡಲೇ ತನ್ನ ಅಂಗಡಿಯನ್ನು ಮುಚ್ಚಿ ಚೆನ್ನೈನ ಟ್ರಿಪ್ಲಿಕೇನ್‌ನಲ್ಲಿರುವ ಹತ್ತಿರದ ಪೊಲೀಸ್ ಠಾಣೆಗೆ ಧಾವಿಸಿದರು.
ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ತನ್ನ ಟ್ಯೂಷನ್ ತರಗತಿಗೆ ಐಸ್ ಹೌಸ್‌ಗೆ ಹೋಗಿದ್ದ.
ಪ್ರಧಾನಿ ಮೋದಿ ಅವರಿಂದ SVAMITVA ಯೋಜನೆಯಡಿ ಆಸ್ತಿ ಕಾರ್ಡ್ ಬಿಡುಗಡೆ
ಪೊಲೀಸರು ತಕ್ಷಣ ಕ್ರಮ ಕೈಗೊಂಡು ಬಾಲಕನ ಫೋನ್ ಪತ್ತೆಹಚ್ಚಿದರು. ಅವನು ಚೆಪಾಕ್ ಪ್ರದೇಶದಲ್ಲಿ ಇರುವುದನ್ನು ಕಂಡುಕೊಂಡ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದಾಗ, ಚೆಪಾಕ್ ರೈಲ್ವೆ ನಿಲ್ದಾಣದ ಬಳಿ ಬಾಲಕ ನಿಂತಿದ್ದನ್ನು ನೋಡಿದರು.
ಪೊಲೀಸರು ಆತನನ್ನು ಪ್ರಶ್ನಿಸಿದಾಗ, ಆತ ತನ್ನನ್ನು ಅಪಹರಿಸಲಾಗಿದೆ ಎಂದು ಹೇಳುತ್ತಲೇ ಇದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರೀಕ್ಷಿಸಿದಾಗ ಆತ ತನ್ನ ಅಪಹರಣದ ಸುಳ್ಳು ಕಥೆ ಹೇಳುತ್ತಿದ್ದಾನೆ ಎಂದು ಪೊಲೀಸರಿಗೆ ಖಚಿತವಾಯಿತು.
ದೀಪಾವಳಿ ಕೊಡುಗೆ – ಇಪಿಎಫ್‌ಒ ಸದಸ್ಯರಿಗೆ ಹಬ್ಬದಂದು ಮೊದಲ ಕಂತಿನ ಬಡ್ಡಿ ಜಮಾ ಸಾಧ್ಯತೆ
ಅಧಿಕಾರಿಯೊಬ್ಬರು, ‘ನಾವು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ನೋಡಿದಾಗ, ಬಾಬು (ಬಾಲಕ) ಮತ್ತು ಆತನ ಸ್ನೇಹಿತ ಆಟೋರಿಕ್ಷಾದಲ್ಲಿ ಸ್ಥಳವನ್ನು ತಲುಪಿರುವುದು ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆಟೋರಿಕ್ಷಾ ಚಾಲಕನನ್ನು ಸಹ ಪ್ರಶ್ನಿಸಲಾಗಿದ್ದು, ಆತ ಬಾಲಕ ಮತ್ತು ಆತನ ಸ್ನೇಹಿತ ಆನ್‌ಲೈನ್‌ನಲ್ಲಿ ಗಾಡಿ ಬುಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ರೈಡ್ ಅನ್ನು ಐಸ್ ಹೌಸ್ – ಕೋಚಿಂಗ್ ಸೆಂಟರ್ ನಿಂದ ಚೆಪಾಕ್ ಗೆ ಕಾಯ್ದಿರಿಸಲಾಗಿದೆ.
ವಾಸ್ತವವಾಗಿ, ಬಾಲಕ ಮತ್ತು ಆತನ ಸ್ನೇಹಿತ ತಮ್ಮ ಗಮ್ಯಸ್ಥಾನವನ್ನು ತಲುಪಿದ ನಂತರ ಮತ್ತು ಹಣವನ್ನು ಕೇಳಿದ ಬಳಿಕ ಬಾಲಕನ ಸ್ನೇಹಿತ ಅಲ್ಲಿಂದ ಹೊರಟು ಬಂದಿದ್ದಾನೆ.
ಬಾಲಕ ಅಂತಿಮವಾಗಿ ತನ್ನ ಯೋಜನೆಯನ್ನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ ನಂತರ, ಅವರು ಮತ್ತೊಮ್ಮೆ ಇದನ್ನು ಪುನರಾವರ್ತಿಸಬಾರದು ಎಂದು ಎಚ್ಚರಿಸಿ ಮನೆಗೆ ಹೋಗಲು ಅವಕಾಶ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ