ಬೆಂಗಳೂರು: ಆರೋಗ್ಯ ಖಾತೆಯಿಂದ ದಿಢೀರ್ ಕೊಕ್ ನೀಡಿರುವುದಕ್ಕೆ ಸಚಿವ ಶ್ರೀರಾಮುಲು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಅಸಮಾಧಾನ ಹೊರಹಾಕಿರುವ ಶ್ರೀರಾಮುಲು, ಕೊರೊನಾ ನಿರ್ವಹಣೆಯಲ್ಲಿ ನಾನು ವೈಫಲ್ಯ ಕಂಡಿದ್ದೇನೆ(corona control failure) ಎಂಬ ಕಳಂಕ ಹೊತ್ತುಕೊಳ್ಳಲು ನಾನು ರೆಡಿ ಇಲ್ಲ. ವೈಫಲ್ಯದ ಹಣೆಪಟ್ಟಿಯನ್ನು ನನಗೆ ಕಟ್ಟಬೇಡಿ, ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಸ್ವಲ್ಪ ಸಮಯ ಕೊಡಿ, ನಾನೇ ಆರೋಗ್ಯ ಇಲಾಖೆ ಬಿಟ್ಟುಕೊಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಢೀರ್ ಆರೋಗ್ಯ ಖಾತೆಯಿಂದ ತಮ್ಮನ್ನು ಬದಲಾವಣೆ ಮಾಡಿದ್ದಕ್ಕೆ ಸಚಿವ ಶ್ರೀರಾಮುಲು ಆಪ್ತರ ಬಳಿಯೂ ಅಳಲು ತೋಡಿಕೊಂಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿಯಾಗಿರುವಾಗ ಖಾತೆ ಬದಲಾವಣೆ ಅಗತ್ಯ ಇರಲಿಲ್ಲ.
ನಾನು ಕೇಳಿದಾಗ ಸಮಾಜ ಕಲ್ಯಾಣ ಖಾತೆ ಕೊಡಲಿಲ್ಲ, ಈಗ ಯಾಕೆ ಕೊಟ್ಟಿದ್ದಾರೆ ಎಂದಿರುವ ರಾಮುಲು, ಖಾತೆ ಬದಲಾವಣೆ ವಿಷಯ ಬಗ್ಗೆ ಖುದ್ದು ಸಿಎಂ ಯಡಿಯೂರಪ್ಪ ಅವರ ಜತೆ ಮಾತನಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಮುಲುಗೆ ಬೇಸರ ಇಲ್ಲ-ಸುಧಾಕರ್
ಆರೋಗ್ಯ ಖಾತೆಯನ್ನು ಹೆಚ್ಚುವರಿಯಾಗಿ ನನಗೆ ನೀಡಿದ್ದಕ್ಕೆ ಸಚಿವ ಶ್ರೀರಾಮುಲು ಅವರಿಗೆ ಬೇಸರ ಇಲ್ಲ ಎಂದು ಸಚಿವ ಡಾ.ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಈ ಸಂಬಂಧ ಶ್ರೀರಾಮುಲು ಅವರಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅವರಿಗೆ ಈ ವಿಚಾರದಲ್ಲಿ ಬೇಸರ ಇಲ್ಲ ಎಂದು ಹೇಳಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ ಬೇಸರ
ಸಮಾಜ ಕಲ್ಯಾಣ ಇಲಾಖೆಯನ್ನು ತಮ್ಮಿಂದ ವಾಪಸ್ ಪಡೆದಿದ್ದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಕಾರಜೋಳ, ನನಗೆ ಒಂದೇ ಖಾತೆ ಸಾಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಗೋವಿಂದ ಕಾರಜೋಳ ಅವರನ್ನು ಸಮಧಾನಪಡಿಸಿದ ಯಡಿಯೂರಪ್ಪ, ನವೆಂಬರ್ 1ರಿಂದ ಸಿ.ಟಿ ರವಿ ಬಳಿ ಇರುವ ಪ್ರವಾಸೋಧ್ಯಮ ಹಾಗೂ ಕನ್ನಡ ಸಂಸ್ಕøತಿ ಖಾತೆಗಳನ್ನು ನಿಮಗೇ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿಎಂ ಮನವೊಲಿಕೆ ಬಳಿಕ `ಆಯ್ತು’ ಎಂದು ಗೋವಿಂದ ಕಾರಜೋಳ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel