ದೇಶದಲ್ಲಿ ಸೋಮವಾರ ಒಂದೇ ದಿನ 66,732 ಹೊಸ ಕೋವಿಡ್ -19 ಪ್ರಕರಣಗಳು ದಾಖಲು covid19 Monday
ಹೊಸದಿಲ್ಲಿ, ಅಕ್ಟೋಬರ್12: ಭಾರತದಲ್ಲಿ ಸೋಮವಾರ ಒಂದೇ ದಿನದಲ್ಲಿ 66,732 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, 816 ಮಂದಿ ಮೃತಪಟ್ಟಿದ್ದಾರೆ. covid19 Monday
ದೇಶದಲ್ಲಿ ಕೋವಿಡ್ -19 ಪ್ರಕರಣಗಳು 71 ಲಕ್ಷ ದಾಟಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಿಅಂಶಗಳ ಪ್ರಕಾರ ಒಟ್ಟು 61 ಲಕ್ಷ ಪ್ರಕರಣಗಳು ಚೇತರಿಕೆ ಕಂಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾವನ್ನು ಇಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಲಾಗಿದೆ. ಇದರ ಪ್ರಕಾರ ದೇಶದ ಕೋವಿಡ್ -19 ಪ್ರಕರಣಗಳು 70,53,806 ಆಗಿದ್ದರೆ, ಸಾವಿನ ಸಂಖ್ಯೆ 1,09,150 ಕ್ಕೆ ಏರಿದೆ.
ಈ ಪೈಕಿ 8,61,853 ಸಕ್ರಿಯ ಪ್ರಕರಣಗಳಾಗಿದ್ದು, 61,49,535 ಪ್ರಕರಣಗಳು ಚೇತರಿಸಿಕೊಂಡಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ – ಎಫ್ಐಆರ್ ದಾಖಲಿಸಿದ ಸಿಬಿಐ
ಪ್ರಪಂಚದಾದ್ಯಂತದ ಕೋವಿಡ್-19 ದತ್ತಾಂಶವನ್ನು ಸಂಗ್ರಹಿಸುತ್ತಿರುವ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ (JHU) ಪ್ರಕಾರ, ಬ್ರೆಜಿಲ್ ಮತ್ತು ಯುಎಸ್ ನಂತರ ಚೇತರಿಸಿಕೊಂಡ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಮುಂದಿದೆ.
ಯುಎಸ್ ನಂತರ ಅತಿಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗಿರುವ ದೇಶದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಆದರೆ ಜಾಗತಿಕವಾಗಿ ಸಂಭವಿಸಿದ ಸಾವುನೋವುಗಳ ವಿಷಯದಲ್ಲಿ ಯುಎಸ್ ಮತ್ತು ಬ್ರೆಜಿಲ್ ನಂತರ ಇದು ಮೂರನೇ ಸ್ಥಾನದಲ್ಲಿದೆ ಎಂದು ಜೆಎಚ್ಯು ಅಂಕಿಅಂಶಗಳು ತಿಳಿಸಿವೆ.
ಒಟ್ಟಾರೆ ಜಾಗತಿಕ ಕೊರೋನವೈರಸ್ ಪ್ರಕರಣಗಳು 37.4 ಮಿಲಿಯನ್ ತಲುಪಿದ್ದು, ಸಾವುಗಳು 1,075,700 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಸೋಮವಾರ ಬೆಳಿಗ್ಗೆ ವೇಳೆಗೆ, ಒಟ್ಟು ಪ್ರಕರಣಗಳ ಸಂಖ್ಯೆ 37,395,029 ಮತ್ತು ಸಾವುನೋವು 1,075,750 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೇಂದ್ರ (ಸಿಎಸ್ಎಸ್ಇ) ತನ್ನ ಇತ್ತೀಚಿನ ನವೀಕರಣದಲ್ಲಿ ಬಹಿರಂಗಪಡಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ