ಆವೆ ಮಣ್ಣಿನ ಅಂಗಣದಲ್ಲಿ ಧೂಳು ಎಬ್ಬಿಸಿದ ಸ್ಪೇನ್ ಗೂಳಿ ರಫೆಲ್ ನಡಾಲ್
ರೋಲ್ಯಾಂಡ್ ಗ್ಯಾರೋಸ್…ಆವೆ ಮಣ್ಣಿನ ಅಂಗಣ. ಪ್ರತಿಷ್ಠಿತ ಫ್ರೆಂಚ್ ಓಪನ್..
ಇದು ಸ್ಪೇನ್ ಗೂಳಿ ರಫೆಲ್ ನಡಾಲ್ ಅವರ ತವರು ಮನೆ.. ನೆಚ್ಚಿನ ಅಂಗಣ.. ಅಚ್ಚುಮೆಚ್ಚಿನ ಪ್ರಶಸ್ತಿ…
ಹೌದು, ಫ್ರೆಂಚ್ ಓಪನ್ ಅಂದ್ರೆ ಅದು ರಫೆಲ್ ನಡಾಲ್.. ರಫೆಲ್ ನಡಾಲ್ ಅಂದ್ರೆ ಫ್ರೆಂಚ್ ಓಪನ್..
ಅಷ್ಟರ ಮಟ್ಟಿಗಿದೆ ನಡಾಲ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿಗಿರುವ ನಂಟು.
2005ರಿಂದ 2020ರವರೆಗೆ ಒಟ್ಟು 13 ಬಾರಿ ರಫೆಲ್ ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
2005ರಿಂದ 2008ರವರೆಗೆ ಸತತ ನಾಲ್ಕು ಬಾರಿ, 2010ರಿಂದ 2014ರವರೆಗೆ ಸತತ ಐದು ಬಾರಿ, 2017ರಿಂದ 2020 ಸತತ ನಾಲ್ಕು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಅಂದ ಹಾಗೇ ನಡಾಲ್ಗೆ ಕಳೆದ 16 ವರ್ಷಗಳಲ್ಲಿ ಮಿಸ್ ಆಗಿದ್ದು ಅಂದ್ರೆ ಅದು 2009, 2015 ಮತ್ತು 2016ರಲ್ಲಿ. ಅಂದ್ರೆ ಮೂರು ಬಾರಿ ಮಾತ್ರ.
ಇದೀಗ ಫ್ರೆಂಚ್ ಓಪನ್ ಫೈನಲ್ ಪಂದ್ಯದಲ್ಲಿ ನಡಾಲ್ ಅವರು 6-0, 6-2, 7-5ರಿಂದ ಸರ್ಬಿಯಾದ ಜಾಕೊವಿಕ್ ಅವರನ್ನು ನೇರ ಸೆಟ್ ಗಳಿಂದ ಪರಾಭವಗೊಳಿಸಿದ್ರು.
ಈ ಮೂಲಕ ನಡಾಲ್ ಅವರು ತನ್ನ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಸಂಖ್ಯೆಯನ್ನು 20ಕ್ಕೇರಿಸಿಕೊಂಡ್ರು.
ಅಲ್ಲದೆ ನಡಾಲ್ ಇದೀಗ ಗರಿಷ್ಠ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದ ಸಾಲಿನಲ್ಲಿ ಸೇರಿಕೊಂಡಿದ್ದಾರೆ.
ಸ್ವಿಜರ್ ಲೆಂಡ್ ನ ರೋಜರ್ ಫೆಡರರ್ ಕೂಡ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
34ರ ಹರೆಯದ ರಫೆಲ್ ನಡಾಲ್ ಅವರು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಾತ್ರ ಅದ್ಭುತ ಆಟವನ್ನೇ ಆಡುತ್ತಾರೆ.
ಅದಕ್ಕಾಗಿಯೇ ಅವರಿಗೆ ಕ್ಲೇ ಕೋರ್ಟ್ ನ ಕಿಂಗ್ ಅಂತನೂ ಕರೆಯಲಾಗುತ್ತಿದೆ.
ಇನ್ನು ರಫೆಲ್ ನಡಾಲ್ ಅವರು ನಾಲ್ಕು ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ. ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.
ಒಂದು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಒಟ್ಟಿನಲ್ಲಿ ರಫೆಲ್ ನಡಾಲ್ ಅವರು ಟೆನಿಸ್ ಜಗತ್ತಿನಲ್ಲಿ ಗರಿಷ್ಠ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದ ಸಾಧನೆ ಮಾಡುವ ಅವಕಾಶವಿದೆ.
ಯಾಕಂದ್ರೆ ರೋಜರ್ ಫೆಡರರ್ ಅವರಿಗೆ ಇದೀಗ 39 ವರ್ಷ. ನಡಾಲ್ಗೆ 34 ವರ್ಷ. ಜಾಕೋವಿಕ್ಗೆ 33 ವರ್ಷ.
ಕಳೆದ ಎರಡು ದಶಕಗಳಿಂದ ಈ ತ್ರಿಮೂರ್ತಿ ಆಟಗಾರರು ಟೆನಿಸ್ ಜಗತ್ತನ್ನು ಆಳುತ್ತಿದ್ದಾರೆ.
ಈ ಮೂವರ ಪೈಕಿ ಒಬ್ಬರಂತೂ ಗರಿಷ್ಠ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವುದಂತೂ ಗ್ಯಾರಂಟಿ. ಅದ್ರಲ್ಲೂ ನಡಾಲ್ ಮತ್ತು ಜಾಕೊವಿಕ್ಗೆ ಹೆಚ್ಚಿನ ಅವಕಾಶವಿದೆ.