ಪ್ರಸ್ತುತ ಎಲ್ಲಿ ನೋಡಿದರೂ ಕೊರೊನಾ…ಕೊರೊನಾ ಎಂಬ ಆತಂಕದ ಸುದ್ದಿ ಹರಡುತ್ತಿದೆ. ಕೊರೊನಾ ವೈರಸ್ ನಿಂದ ಜನರು ಭಯ ಭೀತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಮಹಾಮಾರಿ ಕೊರೊನಾ ಬಾಲಿವುಡ್ ನಟಿ ಹಾಗೂ ಮಾಜಿ ಬ್ಲೂಫಿಲಂ ತಾರೆ ಸನ್ನಿ ಲಿಯೋನ್‌ಗೂ ಕಾಡುತ್ತಿದೆ.
ಸನ್ನಿ ಲಿಯೋನ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕುಟುಂಬದ ಸದಸ್ಯರ ಫೋಟೋವನ್ನು ಹಾಕಿದ್ದಾರೆ. ಪೋಟೋದಲ್ಲಿ ಪತಿ ಡೇನಿಯಲ್ ವೆಬರ್, ಮೂವರು ಮಕ್ಕಳಾದ ನಿಶಾ, ನೌಹ್, ಆಶರ್ ಇದ್ದಾರೆ. ಕರೊನಾ ವೈರಸ್ ಸೋಂಕು ವಿಪರೀತವಾಗಿರುವ ಕಾರಣ ಅವರೆಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದಾರೆ. ಅಲ್ಲದೆ ಈ ರೀತಿ ಬದುಕಬೇಕಾದ ಸ್ಥಿತಿ ಬಂತಲ್ಲ ನನ್ನ ಮಕ್ಕಳಿಗೆ ಎಂದು ಸನ್ನಿ ಲಿಯೋನ್ ಕೊರಗಿದ್ದಾರೆ.
ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ದಂಪತಿ ನಿಶಾಳನ್ನು ಮಹಾರಾಷ್ಟ್ರದ ಲಾತೂರ್‌ನಿಂದ ದತ್ತುಪಡೆದರೆ, ನೌಹಾ ಮತ್ತು ಆಶರ್ ಎಂಬ ಅವಳಿ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. ಸನ್ನಿ ಲಿಯೋನ್ ತಮ್ಮ ಬದುಕಿನ ಬಗ್ಗೆ ಜೀವನ ಶೈಲಿಯ ಬಗ್ಗೆ ನಿಯತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡುತ್ತಿರುತ್ತಾರೆ.
https://www.instagram.com/p/B9zI1xDBjeh/







