ಐಪಿಎಲ್ 2020 – ರಿಷಬ್ ಪಂತ್ ಗಾಯ.. ಒಂದು ವಾರ ವಿಶ್ರಾಂತಿ..!
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಬ್ಯಾಟ್ಸ್ ಮೆನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯಗೊಂಡಿದ್ದಾರೆ.
ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ರಿಷಬ್ ಪಂತ್ ಮಂಡಿ ನೋವಿನಿಂದ ಬಳಲುತ್ತಿದ್ದಾರೆ.
ಹೀಗಾಗಿ ರಿಷಬ್ ಪಂತ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.
ರಿಷಬ್ ಪಂತ್ ಮಂಡಿನೋವಿನಿಂದ ಚೇತರಿಸಿಕೊಳ್ಳಲು ಕನಿಷ್ಠ ಒಂದು ವಾರವಾದ್ರೂ ಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಿಷಬ್ ಬದಲು ಅಲೆಕ್ಸ್ ಕಾರ್ರೆ ಅವರು ಆಡುತ್ತಿದ್ದಾರೆ.
ಪಂತ್ ಮುಂದಿನ ಪಂದ್ಯದಲ್ಲಿ ಆಡುತ್ತಾರೆ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಒಂದು ವಾರಗಳ ವಿಶ್ರಾಂತಿ ಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ರಿಷಬ್ ಪಂತ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಕಳೆದ ಆರು ಪಂದ್ಯಗಳಲ್ಲಿ ರಿಷಬ್ ಪಂತ್ ನಿರೀಕ್ಷಿತ ಮಟ್ಟದ ಆಟ ಹೊರಬಂದಿಲ್ಲ.
ಆದ್ರೂ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವನ್ನಾಡುತ್ತಿದ್ದಾರೆ.
ಕಳೆದ ಐಪಿಎಲ್ ಗೆ ಹೋಲಿಸಿದ್ರೆ ರಿಷಬ್ ಪಂತ್ ಬ್ಯಾಟ್ ಘರ್ಜನೆ ಮಾಡಿಲ್ಲ. ಆದ್ರೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಧಾರವಾಗುತ್ತಿದ್ದಾರೆ.
ಇದೀಗ ಗಾಯಗೊಂಡಿರುವ ಕಾರಣ ರಿಷಬ್ ಪಂತ್ ಅಕ್ಟೋಬರ್ 14ರಂದು ನಡೆಯಲಿರುವ ರಾಜಸ್ತಾನ ರಾಯಲ್ಸ್
ಮತ್ತು ಅಕ್ಟೋಬರ್ 17ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.
ಸದ್ಯ ಆರು ಪಂದ್ಯಗಳನ್ನು ಆಡಿರುವ ರಿಷಬ್ ಪಂತ್ ಒಟ್ಟು 176 ರನ್ ದಾಖಲಿಸಿದ್ದಾರೆ. ಗರಿಷ್ಠ ರನ್ ಅಂದ್ರೆ 38 ರನ್.








