ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ತನ್ನ ಸ್ವಾರ್ಥ ಬುದ್ದಿ ಪ್ರದರ್ಶನ ಮಾಡಿದೆ. ಇಡಿ ವಿಶ್ವವೇ ಕೊರೊನಾ ವೈರಸ್ ನಿಂದಾಗಿ ನರಳುತ್ತಿದೆ. ಕೊರೊನಾ ವೈರಸ್ ಸೋಂಕಿತರನ್ನು ಕಾಪಾಡಲು ಔಷಧಿಗಾಗಿ ಬೇರೆ ಬೇರೆ ದೇಶಗಳು ತುದಿಗಾಲಿನಲ್ಲಿ ನಿಂತಿವೆ. ಇಂತಹ ಸಂಧರ್ಭದಲ್ಲಿ ಅಮೆರಿಕ ಕೊರೊನಾ ವೈರಸ್ನ ಔಷಧಿ ತಮ್ಮ ರಾಷ್ಟಕ್ಕೆ ಮಾತ್ರ ಸೀಮಿತವಾಗಬೇಕು ಎಂಬು ನಿಲುವು ತಳೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ವಿಶ್ವನಾಯಕ ಆಗುವ ಬದಲು ಸ್ವಾರ್ಥ ನಾಯಕನಾಗಲು ಮುಂದಾಗುತ್ತಿದ್ದಾರೆ. ಟ್ರಂಪ್ ೭೦೦೦ ಕೋಟಿ ಹಣ ನೀಡಿ ಕೊರೊನಾ ವೈರಸ್ಗೆ ಔಷಧಿ ಖರೀದಿಸಲು ಮುಂದಾಗಿದ್ದಾರೆ. ಆ ಮೂಲಕ ಎಲ್ಲ ಔಷಧಿ ಅಮೆರಿಕಕ್ಕೆ ಸೀಮಿತವಾಗಿರಬೇಕು ಎಂಬ ಸ್ವಾರ್ಥ ಗುಣ ಪ್ರದರ್ಶನ ಮಾಡಿದ್ದಾರೆ.
ಜರ್ಮನಿಯ ಟುಂಬಿಗೆನ್ ನಲ್ಲಿರುವ ಕರ್ಯೂವಾಕ್ ಎಂಬ ಸಂಸ್ಥೆ ಕೊರೊನಾ ವೈರಸ್ ಸಂಬ0ಧಿಸಿದ ಔಷಧಿಯನ್ನು ತಯಾರಿಸುತ್ತಿದೆ. ಈ ಔಷಧಿ ಬಹುತೇಕ ಯಶ್ವಸಿಯಾಗುವ ಸಾಧ್ಯತೆ ಇದೆ. ಹಾಗಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಈ ಔಷಧಿ ಖರೀದಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಒಂದೆಡೆ ಕೊರೊನಾ ವೈರಸ್ ಔಷಧಿ ಅಮೆರಿಕಕ್ಕೆ ಮಾತ್ರ ಸೀಮಿತವಾಗಿರಬೇಕು. ಜೊತೆಗೆ ಈ ವ್ಯಾಪಾರದಲ್ಲೂ ಅಮೆರಿಕ ಮುಂದೆ ಇರಬೇಕು ಎಂಬ ತಂತ್ರ ಟ್ರಂಪ್ ಮಾಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಔಷಧಿ ತಯಾರು ಮಾಡಿದ ಕಂಪನಿಗೆ ಟ್ರಂಪ್ ಒಂದು ಬಿಲಿಯನ್ ಡಾಲರ್ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಆದರೆ ಜರ್ಮನಿ ಸರ್ಕಾರ ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೊರೊನಾ ಔಷಧಿ ನಮಗೆ ಬೇಕು ಎಂಬ ನಿಲುವು ಹೊಂದಿದೆ. ಅಲ್ಲದೆ ಔಷಧಿ ತಯಾರು ಮಾಡಿದ ಕಂಪನಿಗೆ ಹಣ ನೀಡಲು ಜರ್ಮನಿ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಜರ್ಮನಿಯ ವೆಲ್ಟ್ ಆಮ್ ಸೊನ್ನಟ್ಯಾಗ್ ಎಂಬ ಪತ್ರಿಕೆ ಸುದ್ದಿ ಪ್ರಕಟ ಮಾಡಿತ್ತು. ಇದಾದ ಬಳಿಕ ಜರ್ಮನಿಯ ಹಣಕಾಸು ಸಚಿವ ಅಲ್ಟ್ ವೀಯರ್ ಟಿವಿಯೊಂದಕ್ಕೆ ಸಂದರ್ಶನ ನೀಡುವಾಗ ಜರ್ಮನಿ ಮಾರಾಟಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ
2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...








