ಬೆಂಗಳೂರು : ಶ್ರೀರಾಮುಲು ( Sriramulu ) ಅವರಿಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಿರುವ ಬಗ್ಗೆ ಸಚಿವ ಕೆ.ಎಸ್ ಈಶ್ವರಪ್ಪ ( KS Eshwarappa )ಪ್ರತಿಕ್ರಿಯೆ ನೀಡಿದ್ದು,ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಕ್ತವಾದದ್ದು. ಶೋಷಿತರ ಸೇವೆ ಮಾಡಲು ರಾಮುಲು (Shriramulu) ಅತ್ಯಂತ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಎಂಬುದು ಬಹಳ ದೊಡ್ಡ ಇಲಾಖೆ. ಅದನ್ನು ಸಾಮಾನ್ಯ ಇಲಾಖೆ ಎಂದು ಪರಿಗಣಿಸುವುದು ತಪ್ಪು.
ಶ್ರೀರಾಮುಲು ಈ ಬಗ್ಗೆ ಅಸಮಾಧಾನಗೊಳ್ಳುವ ಅಗತ್ಯವಿಲ್ಲ. ಸಮಾಜ ಕಲ್ಯಾಣ ಇಲಾಖೆ ಯಾರಿಗೆ ನೀಡಿದರೆ ಸೂಕ್ತ ಎಂಬ ಬಗ್ಗೆ ಹಲವು ದಿಗಳಿಂದ ಚರ್ಚೆ ನಡೆದಿತ್ತು ಅದರಂತೆ ಈಗ ಶ್ರೀರಾಮುಲು ಅವರಿಗೆ ನೀಡಲಾಗಿದೆ.
ಇದನ್ನೂ ಓದಿ : ಶೋಭಾ ಕರಂದ್ಲಾಜೆ ಜ್ಯೋತಿಷಿ ಅಲ್ಲ : ಉಮಾಶ್ರೀ ವಾಗ್ದಾಳಿ
ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸೂಕ್ತವಾದದ್ದು. ಶೋಷಿತರ ಸೇವೆ ಮಾಡಲು ಅತ್ಯಂತ ಸೂಕ್ತ ವ್ಯಕ್ತಿ ಬಿ.ಶ್ರೀರಾಮುಲು ಅವರು.
ಆಡಳಿತಾತ್ಮಕವಾಗಿ ಯಾರಿಗೆ ಯಾವ ಹುದ್ದೆ ನಿಭಾಯಿಸಲು ಸಾಧ್ಯ ಎಂಬುದನ್ನು ಚರ್ಚಿಸಿಯೇ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಡಿರುತ್ತಾರೆ ಎಂದಿದ್ದಾರೆ.
ಸುಧಾಕರ್ ಅವರಿಗೆ ಹೆಚ್ಚುವರಿ ಖಾತೆ ನೀಡಿರುವ ಬಗ್ಗೆ ಮಾತನಾಡಿದ ಈಶ್ವರಪ್ಪ, ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಇಲಾಖೆ ಎರಡೂ ಖಾತೆ ಒಬ್ಬ ಸಚಿವರ ಬಳಿ ಇದ್ದರೆ ನಿರ್ವಹಣೆ ಸುಲಭ ಎಂಬ ಕಾರಣಕ್ಕೆ ಸಚಿವ ಸುಧಾಕರ್ ಅವರಿಗೆ ಹೆಚ್ಚುವರಿಯಾಗಿ ಆರೋಗ್ಯ ಖಾತೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷ ಕೋಮುವಾದಿ ಬಿಜೆಪಿ ಜೊತೆ ಸೇರಿದೆ : ಹೆಚ್.ಡಿ.ರೇವಣ್ಣ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel