ಬೆಂಗಳೂರು: ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಖಾತೆಯನ್ನೂ ವಾಪಸ್ ಪಡೆದು ರೆಕ್ಕೆಪುಕ್ಕ ಕಟ್ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಚಿವ ಬಿ.ಶ್ರೀರಾಮುಲು ಅಸಮಾಧಾನಗೊಂಡಿದ್ದರು. ಆದರೆ, ಇಂದು ಶ್ರೀರಾಮುಲು ಹಾಗೂ ಡಾ.ಕೆ ಸುಧಾಕರ್ ರನ್ನು ಅಕ್ಕ-ಪಕ್ಕ ಕೂರಿಸಿಕೊಂಡು ಯಡಿಯೂರಪ್ಪ ಸಂಧಾನ(Ramulu bsy Negotiation) ನಡೆಸಿದ್ದಾರೆ. ಶ್ರೀರಾಮುಲು ಸಂಧಾನ ಸಕ್ಸಸ್ ಆಗಿದೆ, ಸಂತೋಷ್‍ದಿಂದಲೇ ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡರೂ ಅವರ ಹೇಳಿಕೆಗಳಲ್ಲೇ ಅಸಮಾಧಾನ ಎದ್ದು ಕಾಣುತ್ತಿತ್ತು.
ಈಗ ಉಪಚುನಾವಣೆ ಸಮೀಪದಲ್ಲಿದೆ, ಜತೆಗೆ ಕೊರೊನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಹೊರಗಡೆ ಹಾಗೂ ಮತದಾರರಿಗೆ ಕೆಟ್ಟ ಸಂದೇಶ ಹೋಗಬಾರದು. ಹೀಗಾಗಿ ಅಸಮಾಧಾನ ಮರೆತು ಒಟ್ಟಿಗೆ ಕೆಲಸ ಮಾಡಿ ಎಂದು ಸಿಎಂ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ. ಸಿಎಂ ಸಲಹೆಗೆ ಬೇರೆ ದಾರಿ ಇಲ್ಲದೆ ತಲೆಯಾಡಿಸಿದ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ನಿಭಾಯಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮುಲು-ಸುಧಾಕರ್ ಮುಖಾಮುಖಿ ಮಾಡಿದ್ದೇಕೆ..?
ಆರೋಗ್ಯ ಇಲಾಖೆಯನ್ನು ತಮ್ಮಿಂದ ಕಸಿದುಕೊಂಡು ಸಚಿವ ಸುಧಾಕರ್‍ಗೆ ಹೆಚ್ಚುವರಿಯಾಗಿ ನೀಡಿದ್ದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನಗೊಂಡಿದ್ದರು. ನಿನ್ನೆಯೂ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದ ಸಚಿವ ಶ್ರೀರಾಮುಲು ತಮ್ಮ ಅಸಮಾಧಾನ ಹೊರಹಾಕಿದ್ದರು. ಮತ್ತೆ ಸಂಜೆ ಬಾ ಮಾತನಾಡೋಣ ಎಂದು ಹೇಳಿ ಯಡಿಯೂರಪ್ಪ ಅವರು ಶ್ರೀರಾಮುಲು ಅವರನ್ನು ಕಳಿಸಿದ್ದರು.
ಆದರೆ, ಇಂದು ಬೆಳಿಗ್ಗೆ ಸಿಎಂ ನಿವಾಸ ಕಾವೇರಿಗೆ ಶ್ರೀರಾಮುಲು ಹೋಗುವುದರೊಳಗೆ ಸಚಿವ ಸುಧಾಕರ್ ಬಂದು ಕುಳಿತಿದ್ದರು. ತಮಗೂ ಮೊದಲೇ ಸುಧಾಕರ್ ಜತೆ ಬಂದಿರುವುದು ರಾಮುಲುಗೆ ಶಾಕ್ ಕಾದಿತ್ತು. ಇಬ್ಬರನ್ನು ಅಕ್ಕಪಕ್ಕ ಕೂರಿಸಿಕೊಂಡ ಸಿಎಂ ಯಡಿಯೂರಪ್ಪ ಸಂಧಾನ ಮಾಡಿ ಕಿವಿ ಮಾತು ಹೇಳಿ ಕಳಿಸಿದ್ದಾರೆ.
ಒಬ್ಬರನ್ನೇ ಪ್ರತ್ಯೇಕವಾಗಿ ಮಾತನಾಡಿಸಿದರೆ ಬೇರೆಯವರ ಬಗ್ಗೆ ದೂರು ಹೇಳಿ ಅಸಮಾಧಾನ ಹೇಳಿಕೊಳ್ಳುವುದೇ ಆಗುತ್ತದೆ. ಹೀಗಾಗಿ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ. ಶ್ರೀರಾಮುಲು ಮೃದು ಸ್ವಭಾದವರಾದ ಕಾರಣ ಎದುರು ಬದುರು ಕೂರಿಸಿಕೊಂಡು ಮಾತನಾಡಿದರೆ ನನ್ನ ಮಾತು ತಳ್ಳಿ ಹಾಕಲ್ಲ. ಈ ಲೆಕ್ಕಚಾರದಿಂದಲೇ ಈ ಪ್ರಯತ್ನ ನಡೆಸಿದ ಸಿಎಂ ಯಡಿಯೂರಪ್ಪ ಅವರು ಶ್ರೀರಾಮುಲು-ಸುಧಾಕರ್ ಅವರನ್ನು ಮುಖಾಮುಖಿ ಮಾಡಿಸಿದ್ದು ಎನ್ನಲಾಗಿದೆ. ಆದರೆ, ಈ ಸಂಧಾನದ ಮೂಲಕ ಸಚಿವ ಸುಧಾಕರ್ ಸಿಎಂ ಮೇಲೆ ಒತ್ತಡ ಹೇರಿ ತಮ್ಮ ಪ್ರಭಾವ ಬೀರುವಲ್ಲಿ ಯಶಸ್ವಿಯಾದ್ರಾ ಎಂಬ ಮಾತುಗಳೂ ರಾಜ್ಯ ರಾಜ್ಯಕೀಯದಲ್ಲಿ ಕೇಳಿ ಬರುತ್ತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel