ಕೊರೊನಾ ಭೀತಿಗೆ ವಿಶ್ವವೇ ತತ್ತರಿಸಿದೆ. ಜನರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ದೇಶಗಳು ಕೆಲಸ ಮಾಡುತ್ತಿವೆ. ಪ್ರತಿಯೊಂದು ದೇಶದಲ್ಲೂ ಜನ ಜಾತಿ, ಮತ ಭೇದ ಮರೆತು ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಸದಾ ಒಂದಲ್ಲ ಒಂದೂ ರೀತಿ ವಿವಾದ ಸೃಷ್ಠಿ ಮಾಡುವ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೊರೊನಾ ವಿಚಾರದಲ್ಲಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದ್ದಾರೆ.
ಇಟಲಿಯಲ್ಲಿ ಕೊರೊನಾ ಅತಿ ದೊಡ್ಡ ಹಾವಳಿ ಎಬ್ಬಿಸಿದೆ. ಸುಮಾರು 24, 747 ಮಂದಿ ಸೋಂಕಿತರಾಗಿದ್ದಾರೆ. ಸರಿಸುಮಾರು 1809 ಜನ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗೆ ಆಸ್ಪತ್ರೆಗಳ ಅಭಾವತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಐಸಿಯು ಕೊಡುವುದನ್ನು ನಿಲ್ಲಿಸಲು ಯೋಚಿಸುತ್ತಿದೆ. ಜೊತೆಗೆ ಎಲ್ಲ ಸೋಂಕಿತರಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಅಲ್ಲಿಯ ಪ್ರಧಾನಿ ಹೇಳಿದ್ದಾರೆ. ಇಟಲಿಯ ಪ್ರಧಾನಿ ಈ ಬಗ್ಗೆ ಲೇಖನವೊಂದನ್ನು ಬರೆದಿದ್ದಾರೆ. ಇದೀಗ ಆ ಲೇಖನವನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಆ ಲೇಖಕನಕ್ಕೆ ಜೀಸಸ್ ಲವ್ಸ್ ಆಲ್ ಅನ್ನೋ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಕ್ಯಾಪ್ಶನ್ ವ್ಯಂಗ್ಯಭರಿತವಾಗಿದೆ ಎಂದು ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ.
https://twitter.com/Dhananjayaka/status/1239791788233113600
ಒಂದೆಡೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರೇ, ಮತ್ತೊಂದೆಡೆ ಡಾಲಿ ಖ್ಯಾತಿಯ ನಟ ಧನಂಜಯ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡುವ ಮೂಲಕ ಚಕ್ರವರ್ತಿ ಸೂಲಿಬೆಲೆ ಟಾಂಗ್ ಕೊಟ್ಟಿದ್ದಾರೆ. ನಟ ಧನಂಜಯ್ ಮಾಡಿರುವ ಟ್ವೀಟ್ ನಲ್ಲಿ “ಏನಾದರು ಆಗು ಮೊದಲು ಮಾನವನಾಗು” ಅಂತ ಹೇಳಿದ್ದಾರೆ. “ಏನಾದರು ಆಗು ಮೊದಲು ಮಾನವನಾಗು” ಎನ್ನುವ ಮೂಲಕ ಮೊದಲು ಮಾನವೀಯತೆ ಬೆಳೆಸಿಕೊಳ್ಳಿ ಎಂದ ಸಂದೇಶವನ್ನು ಧನಂಜಯ್ ಚಕ್ರವರ್ತಿ ಸೂಲಿಬೆಲೆಯವರಿಗೆ ನೀಡಿದ್ದಾರೆ ಎನ್ನಲಾಗಿದೆ.







