pranitha subhash
ಸ್ಯಾಂಡಲ್ ವುಡ್ ನಟಿ ಪ್ರಣಿತಾ ಸುಭಾಷ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಣಿತಾ (pranitha subhash) ಹೆಸರು ಹೇಳಿ ಎಸ್ ವಿ ಗ್ರೂಪ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಕಂಪೆನಿಗೆ ಬರೋಬ್ಬರಿ 13.5 ಲಕ್ಷ ರೂಪಾಯಿ ಪಂಗನಾಮ ಹಾಕಲಾಗಿದೆ ಎಂದು ಹೇಳಲಾಗಿದೆ.
ಎಸ್ ವಿ ಗ್ರೂಪ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಹೆಸರಿನ ಖಾಸಗಿ ಕಂಪನಿಗೆ ನಟಿ ಪ್ರಣಿತಾ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುತ್ತೇವೆಂದು ಹೇಳಿಕೊಂಡು ಮಹಮ್ಮದ್ ಜುನಾಯತ್, ವರ್ಷ ಎನ್ನುವವರು ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ.
ಕಂಪೆನಿಯ ಮ್ಯಾನೇಜರ್ ರನ್ನು ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ನಟಿ ಪ್ರಣಿತಾರನ್ನು ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ ನಂಬಿಸಿ ಹಣ ನೀಡಿದರೆ ಪ್ರಣಿತಾ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದು ಚಳ್ಳೆ ಹಣ್ಣು ತಿನ್ನಿಸಿದ್ದಾರೆ.
ಮಹಮ್ಮದ್ ಜುನಾಯತ್ ಮತ್ತು ವರ್ಷ ಮಾತಿಗೆ ಮರಳಾಗಿ ಮ್ಯಾನೇಜರ್ 13.5 ಲಕ್ಷ ನಗದು ನೀಡಿದ್ದಾರೆ.
ನಂತರ ರೂಮ್ ಗೆ ಹೋಗಿ ಬರುವುದಾಗಿ ಹೇಳಿ ಹೊರಟು ಹೋಗಿರುವ ಇಬ್ಬರೂ ಖದೀಮರು ಪರಾರಿಯಾಗಿದ್ದಾರೆ.
ಆರೋಪಿಗಳ ಫೋನ್ ಸಹ ಸ್ವಿಚ್ ಆಫ್ ಆಗಿದೆ.
ಉದ್ಯಮ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಪ್ರಶಸ್ತಿ ಪಡೆದ ದರ್ಶನ್ ಪತ್ನಿ
ಈ ಸಂಬಂಧ ಮಹಮ್ಮದ್ ಜುನಾಯತ್ ಮತ್ತು ವರ್ಷ ವಿರುದ್ಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿ ಪ್ರಣಿತಾ ಸದ್ಯ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel