ಮೊಬೈಲ್’ನಲ್ಲಿ ಎಸ್‌ಬಿಐ ಖಾತೆ ಪರಿಶೀಲನೆ – SBI mobile banking
ಹೊಸದಿಲ್ಲಿ, ಅಕ್ಟೋಬರ್14: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ಹೊಂದಿದ್ದರೆ, ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸಲು ಅದಕ್ಕಾಗಿ ಬ್ಯಾಂಕ್ ಗೆ ಹೋಗಬೇಕಾಗಿಲ್ಲ. SBI mobile banking

ಮನೆಯಿಂದ ಅಥವಾ ನೀವಿರುವ ಜಾಗದಿಂದ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಮೊಬೈಲ್ ನಲ್ಲಿ ಪರಿಶೀಲಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ತಮ್ಮ ಮೊಬೈಲ್ ನಿಂದಲೇ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸುವ ಸೌಲಭ್ಯವನ್ನು ಒದಗಿಸಿದೆ.
ಮೊಬೈಲ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡುವ ಸುಲಭ ವಿಧಾನ
ಮೊಬೈಲ್ ನಿಂದ ಎಸ್‌ಬಿಐ ಖಾತೆ ಪರಿಶೀಲಿಸುವುದು ಹೇಗೆ ಇಲ್ಲಿದೆ ವಿವರ.
1. ಇದಕ್ಕಾಗಿ ಪ್ಲೇ ಸ್ಟೋರ್ ನಿಂದ ಮೊದಲು ಎಸ್‌ಬಿಐ ನ ಯೋನೊ(YONO) ಆ್ಯಪ್ ಡೌನ್‌ಲೋಡ್ ಮಾಡಿ.
2. ನಂತರ ಎಸ್‌ಬಿಐ ಗ್ರಾಹಕರು ಯೋನೊ ಆ್ಯಪ್ ಗೆ ಲಾಗಿನ್ ಆಗಬೇಕು.
3. ಬಳಿಕ ‘ಅಕೌಂಟ್’ ಮೇಲೆ ಕ್ಲಿಕ್ ಮಾಡಿ.
4. ಇದನ್ನು ಪೂರ್ಣಗೊಳಿಸಿದ ಬಳಿಕ ‘ಮೈ ಬ್ಯಾಲೆನ್ಸ್’ ಕ್ಲಿಕ್ ಮಾಡಿ.
5. ಈಗ ‘ಖಾತೆ ಉಳಿತಾಯ’ ಎಂಬುದನ್ನು ಆಯ್ಕೆಮಾಡಿ.
6. ಇಲ್ಲಿ ನೀವು ‘ಎಂ-ಪಾಸ್ಬುಕ್’ ಮೂಲಕ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಿಮ್ಮ ಮೊಬೈಲ್ ಫೋನ್ ನಿಂದ ಪರಿಶೀಲಿಸಬಹುದು.

ಇಷ್ಟೇ ಇಲ್ಲ ಎಸ್‌ಬಿಐ ನ ಯೋನೊ ಅಪ್ಲಿಕೇಶನ್ ಮೂಲಕ ಖಾತೆಯನ್ನು ಕೂಡ ತೆರೆಯಬಹುದಾಗಿದೆ. ಯೋನೊ ಆ್ಯಪ್ ಬಳಕೆದಾರರಿಗೆ ಇವಿಷ್ಟು ಮಾತ್ರವಲ್ಲದೇ ವಿವಿಧ ಬಿಲ್ ಗಳನ್ನು ಪಾವತಿಸುವ, ಹಣವನ್ನು ವರ್ಗಾಯಿಸುವ ಸೌಲಭ್ಯಗಳು ಸೇರಿದಂತೆ ಹಲವಾರು ಸೇವೆಗಳನ್ನು ಸಹ ಒದಗಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








