ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ (Congress candidate Kusuma) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. Congress candidate Kusuma
ಆರ್.ಆರ್.ನಗರದ ಬಿಬಿಎಂಪಿ ಕಚೇರಿಯ ಚುನಾವಣಾ ಕೇಂದ್ರದಲ್ಲಿ ಕುಸುಮಾ ಅವರು ಚುನಾವಣಾಧಿಕಾರಿ ಎಲ್. ನಾಗರಾಜ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇದ್ದರು.
ಇದನ್ನೂ ಓದಿ : ಆರ್ ಆರ್ ನಗರ ಬೈ ಎಲೆಕ್ಷನ್ : ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ನಾಮಪತ್ರ ಸಲ್ಲಿಕೆ
ಇನ್ನು ಕುಸುಮಾ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಯು.ಟಿ ಖಾದರ್, ಈಶ್ವರ್ ಖಂಡ್ರೆ, ಉಮಾ ಶ್ರೀ ಸೇರಿದಂತೆ ಹಲವರು ಚುನಾವಣಾ ಕೇಂದ್ರದ ಬಳಿ ಉಪಸ್ಥಿತರಿದ್ದರು.
ರಾಜ್ಯದ ಜನರ ಚಿತ್ತ ಈಗ ಉಪಚುನಾವಣೆಗಳ ಮೇಲೆ ನೆಟ್ಟಿದೆ. ಅದರಲ್ಲೂ ಆರ್. ಆರ್ ನಗರ ಬೈ ಎಲೆಕ್ಷನ್ ಎಲ್ಲರ ಗಮನ ಸೆಳೆದಿದೆ. ಕಾರಣ ಕಾಂಗ್ರೆಸ್ ನಿಂದ ಡಿ.ಕೆ.ರವಿ ಪತ್ನಿ ಕುಸುಮಾ ಕಣದಲ್ಲಿದ್ದು, ಬಿಜೆಪಿ ಪರ ಮುನಿರತ್ನ ಅಖಾಡಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ : ಆರ್ ಆರ್ ನಗರದಲ್ಲಿ `ಬಂಡೆ’ ಆಟ ನಡೆಯಲ್ಲ : ಅಶೋಕ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel