dolly dhananjay
ಡಾಲಿ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಸಹ ಆರಂಭಿಸಿದ್ದಾರೆ ಧನಂಜಯ್.
ಅಲ್ಲದೇ ಚೊಚ್ಚಲ ಚಿತ್ರದ ಶೂಟಿಂಗ್ ಸಹ ಮುಗಿಸಿದ್ದಾರೆ.
ಹೌದು ‘ಬಡವ ರಾಸ್ಕಲ್’ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿಯೂ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಇನ್ನೂ ಇತ್ತೀಚಿಗಷ್ಟೆ ಸಿನಿಮಾದ ಶೂಟಿಂಗ್ ಸಹ ಮುಗಿದಿದೆ.
ಇದೇ ಖುಷಿಯಲ್ಲಿ ತಮ್ಮ ಚೊಚ್ಚಲ ನಿರ್ಮಾಣದ ಸಿನಿಮಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕಾರಿಯಾದ ಇಡೀ ತಂಡಕ್ಕೆ ಧನಂಜಯ್ ವಿಶೇಷವಾದ ಉಡುಗೊರೆ ನೀಡಿದ್ದಾರೆ. 
ಹೌದು ಚಿತ್ರಕ್ಕಾಗಿ ಶ್ರಮಿಸಿದ ಕಾರ್ಮಿಕರಿಗೆ ಧನಂಜಯ್ ವಿಶೇಷವಾದ ಉಡುಗೊರೆ ನೀಡಿದ್ದಾರೆ.
ಚಿತ್ರೀಕರಣದ ಕೊನೆಯ ದಿನ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಗಾಂಧಿ ನಗರದಲ್ಲಿ ಟಾಕ್ ಆಫ್ ಟೌನ್ ಆಗಿದ್ದಾರೆ.
ಶಂಕರ್ ಗುರು ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಅಮೃತಾ ಅಯ್ಯಂಗರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ಅವರ ಸಂಗೀತ ಚಿತ್ರಕ್ಕಿದ್ದು, ಪ್ರೀತಾ ಜಯರಾಂ ಅವರ ಛಾಯಾಗ್ರಹಣ ಇದೆ.
ರೋಹಿತ್ ಪದಕಿ ನಿರ್ದೇಶನದ ರತ್ನನ್ ಪರಪಂಚ, ಡಾನ್ ಜಯರಾಜ್ ಜೀವನಕಥೆ ಹೆಡ್ ಬುಷ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾಲಿ.
ಸದ್ಯ ದೊಡ್ಡ ದೊಡ್ಡ ಸ್ಟಾರ್ ಗಳ ಬಹುನಿರೀಕ್ಷಿತ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ತಾಯಿದ್ದಾರೆ.

ಪುನೀತ್ ರಾಜ್ ಕುಮಾರ್ ನಟನೆ ಯುವರತ್ನ, ದುನಿಯಾ ವಿಜಯ್ ನಟನೆಯ ಸಲಗ, ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾಗಳಲ್ಲಿಯೂ ಧನಂಜಯ್ ಕಾಣಿಸಿಕೊಳ್ತಾಯಿದ್ದಾರೆ.
dolly dhananjay
ಕನ್ನಡಕ್ಕೆ ತೆಲುಗಿನ ‘ಎವರು’ ರೀಮೇಕ್ : ಮುಖ್ಯಭೂಮಿಕೆಯಲ್ಲಿ ದಿಗಂತ್, ಹರಿಪ್ರಿಯಾ, ಪ್ರಭು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








