bollywood
ಲಾಕ್ ಡೌನ್ ಬಳಿಕ ಅಂದ್ರೆ ಸತತ ೬-೭ ತಿಂಗಳುಗಳ ಬಳಿಕ ಮತ್ತೆ ಥಿಯೇಟರ್ ಗಳ ಓಪನ್ ಮಾಡಲು ಇದೇ ಅಕ್ಟೋಬರ್ ಇಂದ ಸರ್ಕಾರ ಅಧಿಚೂನೆ ಹೊರಡಿಸಿದೆ.
ಅದರಂತೆ ನಾಳೆಯಿಂದ ಥಿಯೇಟರ್ ಗಳು ಪುನರಾರಂಭವಾಗಲಿದ್ದು, ಯಾವೆಲ್ಲಾ ಸಿನಿಮಾಗಳು ತೆರೆಗಪ್ಪಳಿಸಲಿವೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.
ಇದೀಗ ಬಾಲಿವುಡ್ ನಲ್ಲಿ ನಾಳೆ ಒಟ್ಟು ೫ ಸಿನಿಮಾಗಳು ಸಿನಿಪ್ರಿಯರನ್ನು ರಂಜಿಸಲು ತೆರ ಮೇಲೆ ಬರುತ್ತಿದೆ. 
ಮರ‍್ಗಸೂಚಿಯ ಪ್ರಕಾರ ಸಿನಿಮಾ ಮಂದಿರಗಳು ಬಾಗಿಲು ತೆರಲಿವೆ. ಆದರೆ ಹೊಸ ಸಿನಿಮಾಗಳನ್ನು ತೆರಯ ಮೇಲೆ ನೋಡಲು ಪ್ರೇಕ್ಷಕರು ಇನ್ನು ಒಂದಿಷ್ಟು ತಿಂಗಳು ಕಾಯಬೇಕಾಗಿ ಬರಬಹುದು.
ಲಾಕ್ ಡೌನ್ ವೇಳೆಯಲ್ಲಿ ಓಟಿಟಿಯಲ್ಲಿ ಬಿಡುಗಡೆಯಾದ ಕೆಲ ಚಿತ್ರಗಳು ಸಿನಿ ಪರದೆಯಲ್ಲಿ ಮತ್ತೆ ಮರು ಬಿಡುಗಡೆಯಾಗಲಿವೆ.
ಖ್ಯಾತ ಚಲನಚಿತ್ರ ವಿರ‍್ಶಕ ಹಾಗೂ ವಿಶ್ಲೇಷಕ ತರಣ್ ಆರ‍್ಶ್ ಟ್ವೀಟರ್ ನಲ್ಲಿ ಮರು ಬಿಡುಗಡೆಯಾಗುವ ಚಿತ್ರಗಳ ಹೆಸರನ್ನು ಟ್ವೀಟ್ ಮಾಡಿದ್ದಾರೆ.
ಅಜಯ್ ದೇವಗನ್ ಅಭಿನಯದ ‘ತಾನಾಜಿ’ ಸೇರಿದಂತೆ, ಅಯುಷ್ಮಾನ್ ಖುರಾನ ಅಭಿನಯದ ‘ಶುಭ್ ಮಂಗಲ್ ಝ್ಯಾದಾ ಸಾವ್ದಾನ್’,
ಸುಶಾಂತ್ ಸಿಂಗ್ ರ ‘ಕೇದಾರನಾಥ್’, ಆದಿತ್ಯ ರಾಯ್ ಅವರ ‘ಮಲಾಂಗ್’, ತಾಪ್ಸಿ ಅವರ ‘ಥಪ್ಪಡ್’ ಚಿತ್ರಗಳು ಮರು ಬಿಡುಗಡೆಯಾಗಿ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣಲಿವೆ.
ಇದರೊಂದಿಗೆ ಹೃತಿಕ್ ರೋಶನ್ ಟೈಗರ್ ಶ್ರಾಫ್ ನಟನೆಯ ವಾರ್ ಚಿತ್ರವೂ ಮರು ಬಿಡುಗಡೆಯಾಗಲಿದೆ.
bollywood








