(Prem)
ನಟಿ ರಕ್ಷಿತಾ ಅವರ ಸಹೋದರ ರಾಣಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಹೀಗಾಗಿ ನಿರ್ದೇಶಕ ಪ್ರೇಮ್ (Prem) ಅವರು ತಮ್ಮ ಬಾಮೈದನಿಗೆ ವಿಶೇಷ ಉಡುಗೊರೆಯೊಂದನ್ನ ನೀಡಿದ್ದಾರೆ.

ರಾಣಾ ಅಭಿನಯದ ಚೊಚ್ಚಲ ಸಿನಿಮಾವಾದ “ಏಕ್ ಲವ್ ಯಾ” ದ ಟೀಸರ್ ಅನ್ನು ಗಿಫ್ಟ್ ಆಗಿ ನೀಡುವ ಮೂಲಕ ಶುಭಹಾರೈಸಿದ್ದಾರೆ ಪ್ರೇಮ್.
ದರ್ಶನ್ ಅಭಿನಯದ “ಕಲಾಸಿಪಾಳ್ಯ” ತೆರೆಕಂಡು ಇಂದಿಗೆ 16 ವರ್ಷ..!
“ಏಕ್ ಲವ್ ಯಾ” ಸಿನಿಮಾದ ಮೂಲಕ ರಾಣಾ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇನ್ನೂ ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ.
ಚಿತ್ರದ ಟೀಸರ್ ರಿಲೀಸ್ ಮಾಡಿ ನಿರ್ದೇಶಕ ಪ್ರೇಮ್, ರಾಣಾಗೆ ಶುಭಾಶಯ ತಿಳಿಸಿದ್ದಾರೆ.
ಜೊತೆಗೆ ಚಿತ್ರದ ಹಾಡುಗಳು ಸದ್ಯದಲ್ಲೇ ನಿಮ್ಮ ಬರಲಿದೆ ಎಂದು ಸಹ ಹೇಳಿದ್ದಾರೆ.
ಇನ್ನೂ ಪ್ರೇಮ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರ ಹಾಗೂ ಹೊಸ ನಾಯಕನ ಬಗ್ಗೆ ಅಭಿಮಾನಿಗಳು, ಸಿನಿಪ್ರಿಯರು ಕಾತರರಾಗಿದ್ದಾರೆ.

ಇನ್ನೂ ವಿಶೇಷ ಎಂದ್ರೆ ಈ ಚಿತ್ರದಲ್ಲಿ ರಾಣಾ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಣಾಗೆ ನಾಯಕಿಯಾಗಿ ರೇಷ್ಮಾ ನಾಣಯ್ಯ ನಟಿಸುತ್ತಿದ್ದಾರೆ.
ರೊಮ್ಯಾಂಟಿಕ್ ಕಥೆಯುಳ್ಳು ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಕೂಡ ಅಭಿನಯಿಸುತ್ತಿದ್ದಾರೆ. ಇನ್ನೂ ನಟಿ ರಕ್ಷಿತಾ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಸಿನಿಮಾ ನಂಬಿ ತಂದೆ-ತಾಯಿ ಕನಸು, ಜೀವನ ಹಾಳು ಮಾಡಿಕೊಳ್ಳದಿರಿ: ಜಗ್ಗೇಶ್ ಕಿವಿಮಾತು
ಇನ್ನೂ ವಿಶೇಷ ಎಂದ್ರೆ ಮದುವೆಯ ಬಳಿಕ ಇದೇ ಮೊದಲ ಬಾರಿಗೆ ರಕ್ಷಿತಾ ಬಣ್ಣ ಹಚ್ಚಿದ್ದಾರೆ.

ಸದ್ಯ ಬೆಂಗಳೂರು ಮತ್ತು ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಚಿತ್ರದಲ್ಲಿ ಮ್ಯಾಜಿಕ್ ಮ್ಯುಸಿಷಿಯನ್ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








