Salman khan
ಬಾಲಿವುಡ್ ನ ‘ಸುಲ್ತಾನ’ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ “ರಾಧೆ” ಸಿನಿಮಾದ ಶೂಟಿಂಗ್ ಸದ್ಯ ಕಂಪ್ಲೀಟ್ ಆಗಿದೆ.
ಶೂಟಿಂಗ್ ಮುಗಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುದ್ದು ಸಲ್ಮಾನ್ ಖಾನ್ ಅವರೇ ಬಹಿರಂಗಪಡಿಸಿದ್ದಾರೆ.
ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಅಂದರೆ ಸುಮಾರು 7 ತಿಂಗಳ ನಂತರ ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಚಿತ್ರೀಕರಣಕ್ಕೆ ಮರಳಿದ ಸಂತಸವನ್ನು ಸಲ್ಲು ಹಂಚಿಕೊಂಡಿದ್ದರು. ಅಲ್ಲದೆ ಚಿತ್ರದ ಮೇಕಿಂಗ್ ದೃಶ್ಯಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಂದ್ಹಾಗೆ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ದಿಸಾ ಪಟಾನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
“ಕೆಜಿಎಫ್” ಶೂಟಿಂಗ್ ಅಖಾಡಕ್ಕೆ ಎಂಟ್ರಿ ಆಗ್ತಿದ್ದಾರೆ ‘ಅಧೀರ’ : ಸಂಜು ಬಾಬ ಹೇಳಿದ್ದೇನು..?
ಅಲ್ಲದೇ ಜಾಕಿ ಶ್ರಾಫ್ , ರಣದೀಪ್ ಹೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅನೇಕರ ತಾರಾಬಳಗ ಚಿತ್ರದಲ್ಲಿದೆ.
ಸದ್ಯ ರಾಧೆ ಚಿತ್ರೀಕರಣ ಮುಗಿಸಿರುವ ಸಲ್ಲು ಮುಂದಿನ ಸಿನಿಮಾ ಟೈಗರ್ ಆಯೇಗಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಅಲ್ಲದೇ ಸಲ್ಲು ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲು ನಿರೂಪಣೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
Salman khan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel