74 ವರ್ಷದ ವ್ಯಕ್ತಿಯನ್ನು ಮೃತಪಟ್ಟಿದ್ದಾರೆ ಎಂದು ಭಾವಿಸಿ ಫ್ರೀಜರ್ ಪೆಟ್ಟಿಗೆಯಲ್ಲಿರಿಸಿದ ಕುಟುಂಬ – Man inside freezer
ಚೆನ್ನೈ, ಅಕ್ಟೋಬರ್16: ತಮಿಳುನಾಡಿನ ಸೇಲಂ ಮೂಲದ ಬಾಲಸುಬ್ರಮಣ ಕುಮಾರ್ ಎಂಬ 74 ವರ್ಷದ ವ್ಯಕ್ತಿಯನ್ನು ಮೃತಪಟ್ಟಿದ್ದಾರೆ ಎಂದು ಭಾವಿಸಿ ಫ್ರೀಜರ್ ಪೆಟ್ಟಿಗೆಯೊಳಗೆ ಇರಿಸಿದ ಘಟನೆ ನಡೆದಿದೆ. Man inside freezer
ಕುಮಾರ್ ಅವರನ್ನು ಪೊಲೀಸರು ರಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಸುಬ್ರಮಣ ಕುಮಾರ್ ಸೇಲಂ ಜಿಲ್ಲೆಯ ಕಂಧಂಪಟ್ಟಿ ನಿವಾಸಿಯಾಗಿದ್ದು, ಅವರು ತಮ್ಮ ಕಿರಿಯ ಸಹೋದರ ಸರವಣನ್ ಅವರೊಂದಿಗೆ ವಾಸಿಸುತ್ತಿದ್ದರು. ಅಕ್ಟೋಬರ್ 12 ರಂದು, ಸರವಣನ್ ತನ್ನ ಸಹೋದರ ಮೃತಪಟ್ಟಿದ್ದಾರೆಂದು ಭಾವಿಸಿ ಫ್ರೀಜರ್ ಪೆಟ್ಟಿಗೆಗಳನ್ನು ಒದಗಿಸುವ ಕಂಪನಿಗೆ ಕರೆ ಮಾಡಿ ಫ್ರೀಜರ್ ಪೆಟ್ಟಿಗೆಯನ್ನು ತನ್ನ ಮನೆಗೆ ತಲುಪಿಸಲು ಹೇಳಿದರು.
ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆ – ಎಂಜಿನಿಯರಿಂಗ್ ಅಧಿಕಾರಿ ಹುದ್ದೆಗೆ ಆನ್ಲೈನ್ ಅರ್ಜಿ ಆಹ್ವಾನ
ಫ್ರೀಜರ್ ಬಾಕ್ಸ್ ಪಡೆದ ನಂತರ, ಸರವಣನ್ ಮತ್ತು ಅವರ ಕುಟುಂಬ ಸದಸ್ಯರು ಕುಮಾರ್ ಅವರನ್ನು ಪೆಟ್ಟಿಗೆಯೊಳಗೆ ಇರಿಸಿ ಅವರು ಮೃತಪಟ್ಟಿದ್ದಾರೆ ಎಂದು ಎಲ್ಲರಿಗೂ ಕರೆ ಮಾಡಿ ಮಾಹಿತಿ ನೀಡಿದರು. ಕುಮಾರ್ ಅವರನ್ನು ರಾತ್ರಿಯಿಡೀ ಆ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು.
ಮರುದಿನ ಫ್ರೀಜರ್ ಪೆಟ್ಟಿಗೆಯನ್ನು ಒದಗಿಸಿದ ಕಂಪನಿಯ ಸಿಬ್ಬಂದಿ, ಪೆಟ್ಟಿಗೆಯನ್ನು ವಾಪಸ್ ಪಡೆಯಲು ಬಂದಾಗ, ಕುಮಾರ್ ಇನ್ನೂ ಜೀವಂತವಾಗಿ ಮತ್ತು ಉಸಿರಾಡುತ್ತಿರುವುದನ್ನು ನೋಡಿದರು.
ಎಲ್ಲಾ ಸಚಿವಾಲಯಗಳಿಗೆ ಬಿಎಸ್ಎನ್ಎಲ್/ಎಂಟಿಎನ್ಎಲ್ ಸೇವೆ ಕಡ್ಡಾಯ – ಕೇಂದ್ರದ ಆದೇಶ
ಕುಮಾರ್ ಇನ್ನೂ ಜೀವಂತವಾಗಿದ್ದಾರೆ ಎಂದು ಅವರು ನೆರೆಹೊರೆಯವರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಬಾಲಸುಬ್ರಮಣ ಕುಮಾರ್ ಅವರನ್ನು ಸೇಲಂನ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅವರ ಸಹೋದರ ತನ್ನ ಕಾರ್ಯಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು, , ಕುಮಾರ್ ಅವರ ದೇಹದಲ್ಲಿ ಯಾವುದೇ ಚಲನೆ ಕಂಡುಬಂದಿರಲಿಲ್ಲ. ಈ ಕಾರಣದಿಂದ ಸಂಬಂಧಿಕರು ಬರುವವರೆಗೆ ಫ್ರೀಜರ್ನಲ್ಲಿ ಅವರ ಮೃತದೇಹವನ್ನು ಇರಿಸಲು ಬಯಸಿದ್ದೆವು ಎಂದು ಹೇಳಿದ್ದಾರೆ
ಅಧಿಕಾರಿಗಳು ಸರವಣನ್ ಮತ್ತು ಅವರ ಕುಟುಂಬದ ವಿರುದ್ಧ ಸೆಕ್ಷನ್ 287 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯ ವರ್ತನೆ), ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ